ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ಆರೋಪಿಯಾಗಿರುವ ₹200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಶುಕ್ರವಾರ ದೆಹಲಿ ಕೋರ್ಟ್ ಎದುರು ಹಾಜರಾದರು.
ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ವಾದ ವಿವಾದಗಳನ್ನು ಆಲಿಸಿದರು. ಆರೋಪಿ ಚಂದ್ರಶೇಖರ್‌ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಪ್ರಕರಣದಲ್ಲಿ ಜಾಕ್ವೆಲಿನ್‌ಗೆ ನ.15ರಂದು ಕೋರ್ಟ್ ಸಾಮಾನ್ಯ ಜಾಮೀನು ನೀಡಿತ್ತು.