Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದೇಶಕ್ಕಾಗಿ ರಾಜ್ಯದಿಂದ ಕನಿಷ್ಠ 24 ಸೀಟುಗಳನ್ನಾದರು ಗೆಲ್ಲಬೇಕು: ಎಚ್‌.ಡಿ ದೇವೇಗೌಡ!

ಮೈಸೂರು: ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿಂದು (ಏ.೧೪) ನಡೆದ ಸಮಾವೇಶದಲ್ಲಿ ಮಾಜಿ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡರು ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 24 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿ ಕೈ ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಜೆಡಿಎಸ್‌ ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದರು. ಆದರೆ, ಮತದಾನಕ್ಕೂ ಮುನ್ನ ಒಂದೆರಡು ದಿನಗಳ ಮುಂಚೆ ಮಹಿಳೆಯರಿಗೆ 2,000 ರೂ. ಗ್ಯಾರಂಟಿ ಕೊಡ್ತೇವೆ ಎಂದು 5 ಗ್ಯಾರಂಟಿಗಳನ್ನು ಕೊಟ್ಟು ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಂತಹ ಎರಡು ಮಹನೀಯರು ಇದ್ದಾರೆ. ಅವರು ಇಂಡಿಯಾ ಮೈತ್ರಿಕೂಟ ಬಿಟ್ಟು ಎನ್‌ಡಿಎ ಸೇರಿದ್ದಾರೆ ಎಂಥಾ ದುರ್ದೈವಾ ಎನ್ನುತ್ತಿದ್ದಾರೆ. ಅದರೆ ನನ್ನ ೯೧ ವಯಸ್ಸಿನಲ್ಲಿ 64 ವರ್ಷದ ರಾಜಕೀಯ ಜೀವನದಲ್ಲಿ ಈ ದೇಶಕ್ಕೆ ಕೀರ್ತಿ ತದುಕೊಟ್ಟ ವ್ಯಕ್ತಿ ನನ್ನ ಪಕ್ಕದಲ್ಲಿದ್ದಾರೆ ಅವರೇ ನರೇಂದ್ರ ಮೋದಿ, ನನ್ನ ತಲೆಯಲ್ಲಿ ಬುದ್ಧಿ ಇಲ್ದೆನೇ ಕುಮಾರಸ್ವಾಮಿ ನಾ ಹೋಗು ಎಂದು ಹೇಳಿಲ್ಲ ಎಂದು ಕಿಡಿಕಾರಿದರು.

ನನ್ನ ಪಕ್ಕದಲ್ಲಿ ಯದುವೀರ್ ಅವರು ಕುಳಿತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ರಾಜಶ್ರೀ ಅವರು ರಾಜ್ಯಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ. ಎರಡು ಮಹಾನುಭಾವರು ಈಗ ಇಡೀ ರಾಜ್ಯವನ್ನು ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ. ಕೇವಲ ಒಬ್ಬ ರಾಜ್ಯದ ಮುಖ್ಯಮಂತ್ರಿ ಕೇವಲ 6 ಕೋಟಿ ಜನರ ಮುಖ್ಯಮಂತ್ರಿಯಾಗಿ, 150 ಕೋಟಿ ಜನರ ಪ್ರಧಾನಮಂತ್ರಿ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ನನ್ನ ಪಕ್ಕದಲ್ಲಿ ಯದುವೀರ್ ಅವರು ಕುಳಿತಿದ್ದಾರೆ. ರಾಜಶ್ರೀ ಅವರು ರಾಜ್ಯಕ್ಕಾಗಿ ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ನೆನೆಯಬೇಕು. ಆದರೇ, ಎರಡು ಮಹಾನುಭಾವರು ಈಗ ಇಡೀ ರಾಜ್ಯವನ್ನು ಆಳುತ್ತಿದ್ದಾರೆ. ಆ ಪುಣ್ಯಾತ್ಮರಿಗೆ ನಮೋ ನಮಃ. ಅದರಲ್ಲಿ ಒಬ್ಬ ಕೇವಲ 6 ಕೋಟಿ ಜನರ ಮುಖ್ಯಮಂತ್ರಿಯಾಗಿ, 150 ಕೋಟಿ ಜನರ ಪ್ರಧಾನಮಂತ್ರಿ ಬಗ್ಗೆ ಮಾತನಾಡುತ್ತಾರೆ.

ಮೈತ್ರಿಯಿಂದ ನನಗೆ ಮೂರು ಸೀಟ್‌ ಮಾತ್ರ ಸಿಕ್ಕಿದೆ ಎಂದಲ್ಲ, ರಾಜ್ಯದ ಒಟ್ಟು ೨೮ ಸೀಟ್‌ಗಳು ನನಗೆ ಇದೆ. ರಾಯಚೂರು, ಬೀದರ್‌ ಎಲ್ಲೆ ಕರೆದು ಪ್ರಚಾರಕ್ಕಾಗಿ ಹೋಗುತ್ತೇನೆ. ಈ ರಾಜ್ಯಕ್ಕಾಗಿ ೬೦ ವರ್ಷ ದುಡಿದಿದ್ದೇನೆ. ಇಲ್ಲಿಂದ ಕನಿಷ್ಠ ೨೪ ಕ್ಷೇತ್ರ ಗೆದ್ದು ಮೋದಿ ಅವರಿಗೆ ಸಲ್ಲಿಸುತ್ತೇವೆ. ಜೆಡಿಎಸ್‌ ಕೇವಲ ಮೂರಲ್ಲ, ಎನ್‌ಡಿಎದ ೨೮ ಕ್ಷೇತ್ರವಾಗಿದೆ. ಇವಗಳನ್ನು ಗೆಲ್ಲುವುದು ಬಿಎಸ್‌ವೈ ಹಾಗೂ ನಮ್ಮ ಕೆಲಸವಾಗಿದೆ ಎಂದು ಹೇಳಿದರು.

ರಾಜ್ಯದ ಜನತೆಯಲ್ಲಿ ಕೈಮುಗಿದು ಕೇಳುತ್ತೇನೆ. ಈ ರಾಷ್ಟ್ರವನ್ನು ಬಲಯುತವಾಗಿ ಬೆಳೆಸುವ ಶಕ್ತಿ ಎನ್‌ಡಿಎ ಬಳಿಯಿದ್ದು, ಅದು ಕೇವಲ ನರೇಂದ್ರ ಮೋದಿ ಅವರು ಮಾತ್ರ. ಆದರೆ ಐಎನ್‌ಡಿಐಎ ದಲ್ಲಿ ಇಂತಹ ಶಕ್ತಿ ಇಲ್ಲ. ಅದಕ್ಕಾಗಿ ಯಾರು ತಪ್ಪು ತಿಳಿಯಬಾರದು. ಇದು ಬಿಜೆಪಿ ಪ್ರಶ್ನೆಯಲ್ಲ. ಎನ್‌ಡಿಎ ಕನಸು ೪೦೦ ಇದ್ದು, ರಾಜ್ಯದಿಂದ ನಾವು ಕನಿಷ್ಠ ೨೪ ಸ್ಥಾನಗಳನ್ನಾದರು ಗೆದ್ದು ಮೋದಿಗೆ ಕರ್ನಾಟಕದಿಂದ ಕೊಡುಗೆ ನೀಡಬೇಕು. ಇದನ್ನು ಕನ್ನಡ ಜನತೆ ಮಾನ್ಯ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಮನವಿ ಮಾಡಿದರು.

Tags: