Mysore
26
haze

Social Media

ಗುರುವಾರ, 01 ಜನವರಿ 2026
Light
Dark

ಪಂಚರ್‌ ಹಾಕುವವರ ಹತ್ತಿರ ಯಾಕೆ ಓಟು ಕೇಳ್ತಿರ: ಕುಮಾರಸ್ವಾಮಿಗೆ ಜಮೀರ್‌ ಪ್ರಶ್ನೆ

ಕುಮಾರಸ್ವಾಮಿ ಎಂದರೆ ಯೂಟರ್ನ್:‌ ಜಮೀರ್‌ 

ಬೆಂಗಳೂರು: ಕುಮಾರಸ್ವಾಮಿ ರಾಜಕಾರಣದಲ್ಲಿ ಯಾವಾಗ ಸತ್ಯ ಹೇಳಿದ್ದಾರೆ. ಕುಮಾರಸ್ವಾಮಿಗೆ ಇನ್ನೊಂದು ಹೆಸರೇ ಯೂಟರ್ನ್.‌ ಅವರು ಯಾವಾಗ, ಹೇಗೆ ಬೇಕಾದರೂ ಯೂಟರ್ನ್‌ ಮಾಡ್ತಾರೆ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರು ಪಂಚರ್‌  ಹಾಕುವವರು, ವೆಲ್ಡಿಂಗ್‌ ಮಾಡುವವರು ಅಂತೆಲ್ಲಾ ಲಘುವಾಗಿ ಮಾತನಾಡಿದ್ದಾರೆ. ಅಂಥವರ ಬಳಿ ಯಾಕೆ ಓಟು ಕೇಳಬೇಕು. ನಿನ್ನೆಯು ಕುಮಾರಸ್ವಾಮಿ ಅದೇ ಹೇಳಿದ್ದಾರೆ. ಹೌದು ಸ್ವಾಮಿ ಮುಸ್ಲಿಮರು ಬಡವರು ಅಂಥವರ ಬಳಿ ನೀವು ಓಟು ಕೇಳಬಾರದು ಎಂದು ಕಿಡಿಕಾರಿದರು.

ನಾನು ದೇವೇಗೌಡರ ಕುಟುಂಬ ಖರೀದಿ ಮಾಡುತ್ತೇನೆ ಎಂದು ಹೇಳಿಲ್ಲ. ಕುಮಾರಸ್ವಾಮಿ ಮುಸ್ಮಿಮರು ನನಗೆ ಬೇಕಾಗಿಲ್ಲ ಅಂತಾ ಹೇಳಿದ್ರು. ಈ ಹಿನ್ನೆಲೆ ಮುಸ್ಮಿಂ ಓಟು ಬೇಡ ಅಂತ ದುಡ್ಡು ಕೊಟ್ಟು ಖರೀದಿ ಮಾಡ್ತಿದ್ದೀರಿ ಅಲ್ವ? ಇದು ಎಷ್ಟು ಸರಿ ಅಂತ ನಾನು ಕೇಳಿದ್ದು ಎಂದರು.

ನಾನು  ಮಠದ ಹುಡುಗ

ನಾನು ಆದಿಚುಂಚನಗಿರಿ ಮಠದಲ್ಲಿ ಬೆಳದಿದ್ದು. ನಾನು ಮಠದ ಹುಡುಗ. ಒಕ್ಕಲಿಗರ ಬಗ್ಗೆ ಗೌರವವಿದೆ. ಸ್ವಾಮೀಜಿ ಮಡಿಲಲ್ಲಿ ಬೆಳೆದವ ನಾನು. ಬೇಕಿದ್ದರೆ ಕುಮಾರಸ್ವಾಮಿಯನ್ನೇ ಕೇಳಿ. ನಾನು ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಅಷ್ಟೇ ಎಂದು ಪುನರುಚ್ಚರಿಸಿದರು.

Tags:
error: Content is protected !!