ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದ್ದು, ವಿಪಕ್ಷಗಳು ಹಲವು ವಿಚಾರಗಳ ಕುರಿತು ಕೋಲಾಹಲ ಎಬ್ಬಿಸಲು ಸಾಧ್ಯತೆಯಿದೆ.
ಮಣಿಪುರ ವಿದ್ಯಮಾನ, ಅದಾನಿ ಸಮೂಹದ ವಿರುದ್ಧದ ಆರೋಪಗಳು ಹಾಗೂ ವಾಯುಮಾಲಿನ್ಯ ಕುರಿತು ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.
ಹೀಗಾಗಿ ಇಂದಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತಿವೆ.
ಇನ್ನು ಸಿಪಿಐ ಪ್ರಕಟಣೆ ಹೊರಡಿಸಿದ್ದು, ಕೇರಳ ಕುರಿತು ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದೆ.
ಒಟ್ಟಿನಲ್ಲಿ ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ಕೋಲಾಹಲ ನಡೆಯುವ ಸಾಧ್ಯತೆಯಿದ್ದು, ಎಲ್ಲವನ್ನು ಎದುರಿಸಲು ಆಡಳಿತ ಪಕ್ಷ ಸಕಲ ರೀತಿಯಲ್ಲೂ ತಯಾರಾಗಿದೆ ಎನ್ನಲಾಗುತ್ತಿದೆ.