Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಮ್ಮ ಪಕ್ಷದಲ್ಲಿ ಇಂತಹ ಅಪರೇಷನ್‌ ಮಾಡುವ ಹುಚ್ಚು ನಮಗಿಲ್ಲ ಎಂದ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್

ಬೆಂಗಳೂರು: ಕಾಂಗ್ರೆಸ್‌ ಶಾಸಕರು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು 50 ಕೋಟಿ ರೂಪಾಯಿಗೆ ಬಿಗ್‌ ಆಫರ್‌ ಮಾಡಿದ್ದಾರೆಂಬ ಆರೋಪಕ್ಕೆ ಮಾಜಿ ಡಿಸಿಎಂ ಸಿ.ಎನ್‌.ಅಶ್ವಥ್‌ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್‌ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು 50 ಕೋಟಿ ರೂಪಾಯಿ ಆಫರ್‌ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಆದರೆ ಶಾಸಕ ರವಿಕುಮಾರ್‌ ಗಣಿಗ ಅವರಿಗೆ ಮಾತ್ರ ಉತ್ತರ ನೀಡಿ ಕೂರಬೇಕಾ? ಕಟ್ಟುಕಥೆ ಕಟ್ಟಿಕೊಂಡು ಮನರಂಜನೆ ನೀಡುವ ಉದ್ದೇಶ ಬಿಜೆಪಿ ನಾಯಕರಿಗಿಲ್ಲ. ಅಲ್ಲದೇ, ನಮ್ಮ ಪಕ್ಷದಲ್ಲಿ ಇಂತಹ ಅಪರೇಷನ್‌ ಮಾಡುವ ಹುಚ್ಚ ನಮಗಿಲ್ಲ ಎಂದು ರವಿಕುಮಾರ್‌ ಗಣಿಗ ಆರೋಪವನ್ನು ತಳ್ಳಿ ಹಾಕಿದರು.

Tags: