Mysore
13
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ʼಟೆನೆಂಟ್ʼನಲ್ಲಿ ಕೋವಿಡ್ ಕಾಲದ ಕರಾಳ ಮುಖದ ಅನಾವರಣ

ಕೋವಿಡ್ ಕಾಲದಲ್ಲಾದ ನೈಜ ಘಟನೆಗಳನ್ನಿಟ್ಟುಕೊಂಡು ಕೆಲವು ಚಿತ್ರಗಳು ಮತ್ತು ವೆಬ್ಸರನಿಗಳು ಈಗಾಗಲೇ ತಯಾರಾಗಿವೆ. ನಾಳೆ (ನವೆಂಬರ್ ೨೨) ಬಿಡುಗಡೆ ಅಗುತ್ತಿರುವ ಶ್ರೀಧರ್ ಶಾಸ್ತ್ರಿ ನಿರ್ದೇಶನದ ʼಟೆನೆಂಟ್ʼ ಸಹ ಒಂದು.

ʼಟೆನೆಂಟ್ʼ ಕೇವಲ ಐದು ಪಾತ್ರಗಳ ಸುತ್ತ ಸುತ್ತುವ ಚಿತ್ರ. ಈ ಚಿತ್ರವು ಒಂದು ಮನೆ ಮತ್ತು ಕೇವಲ ಐದು ಪಾತ್ರಗಳ ಸುತ್ತ ಸುತ್ತುತ್ತದಂತೆ. ಇದರಲ್ಲಿ ಧರ್ಮ ಕೀರ್ತಿರಾಜ್, ʼಉಗ್ರಂʼ ಮಂಜು, ತಿಲಕ್, ರಾಕೇಶ್ ಮಯ್ಯ ಮತ್ತು ಸೋನು ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ಶಾಸ್ತ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಶ್ರೀಧರ್ ಶಾಸ್ತ್ರೀ, ʼಕೋವಿಡ್ ಸಮಯದಲ್ಲಿ ಬದುಕೋದೇ ಕಷ್ಟ ಎನ್ನುವಾಗ, ಇಂಥ ಸಂದರ್ಬವನ್ನೂ ಜನ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಆಕ್ಸಿಜನ್ ಸಿಲಿಂಡರ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡಲಾಯಿತು. ಆಂಬ್ಯುಲೆನ್ಸ್ ಸಿಗುವುದು ದುಬಾರಿಯಾಯಿತು. ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡುವ ದಂಧೆ ಶುರುವಾದ ಸುದ್ದಿಗಲು ಕೇಳಿ ಬರುತ್ತಿದ್ದವು. ಈ ಸುದ್ದಿಗಳನ್ನು ಕೇಳಿ ಜನಸಾಮಾನ್ಯರಿಗೆ ಆಘಾತ ಅಘಾತವಾಗುವುದರ ಜೊತೆಗೆ ಬೇಸರವೂ ಆಯಿತು. ಹೀಗೆ ಮಾಧ್ಯಮಗಳಲ್ಲಿ ಓದಿದ ಮತ್ತು ಕೇಳಿದ ಹಲವು ಘಟನೆಗಳನ್ನು ಸೇರಿಸಿ ಒಂದು ಕಥೆ ಮಾಡಿಕೊಂಡೆ. ಕೋವಿಡ್ನ ಕರಾಳ ಮುಖಗಳನ್ನು ತೋರಿಸುವ ನಿಟ್ಟಿನಲ್ಲಿ ಕತೆ ತಯಾರಾಯಿತುʼ ಎನ್ನುತ್ತಾರೆ ಶ್ರೀಧರ್.

ಇಲ್ಲಿ ಧರ್ಮ ಕೀರ್ತಿರಾಜ್ ಮನೆ ಬಾಡಿಗೆದಾರನಾಗಿ ಕಾಣಿಸಿಕೊಂಡರೆ, ಪೊಲೀಸ್ ಅಧಿಕಾರಿಯಾಗಿ ತಿಲಕ್ ಕಾಣಿಸಿಕೊಂಡಿದ್ದಾರೆ. ʼಉಗ್ರಂʼ ಮಂಜು ಈ ಚಿತ್ರದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದು, ಮನೆಯ ಮಾಲೀಕರಾಗಿ ರಾಕೇಶ್ ಮಯ್ಯ ಮತ್ತು ಸೋನು ಗೌಡ ನಟಿಸಿದ್ದಾರೆ.

ಮಾಸ್ಟರ್ ಚಾಯ್ಸ್ ಕ್ರಿಯೇಷನ್ಸ್ನಡಿ ನಾಗರಾಜ್ ಟಿ ನಿರ್ಮಿಸಿರುವ ‘ಟೆನೆಂಟ್‍’ ಚಿತ್ರಕ್ಕೆ ಗಿರೀಶ್ ಹೊತೂರ್ ಸಂಗೀತ, ಉಜ್ವಲ್ ಸಂಕಲನ ಮತ್ತು ಮನೋಹರ್‍ ಜೋಷಿ ಅವರ ಛಾಯಾಗ್ರಹಣವಿದೆ.

Tags:
error: Content is protected !!