ನವದೆಹಲಿ: ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅಂಗನವಾಡಿ ಮಕ್ಕಳಿಗೆ ಎಂಟು ಕೋಟಿ ಹಾಗೂ 1 ಕೋಟಿ ಮಹಿಳೆಯರಿಗೆ ಪೌಷ್ಟಿಕ ಆಹಾರವನ್ನು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಂಸತ್ ಭವನದಲ್ಲಿ ಇಂದು(ಫೆಬ್ರವರಿ.1) ಬಜೆಟ್ ಮಂಡನೆ ಮಾಡಿದ ಅವರು, ಸಕ್ಷಮ್ ಅಂಗನವಾಡಿ ಹಾಗೂ ಪೋಷಣ್ 2.0 ಯೋಜನೆಯಡಿಯಲ್ಲಿ ಭಾರತದಾದ್ಯಂತ ಸುಮಾರು 8 ಕೋಟಿಗೂ ಅಧಿಕ ಮಕ್ಕಳಿಗೆ, ಒಂದು ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಮತ್ತು ಈಶಾನ್ಯ ಪ್ರದೇಶದ ಸುಮಾರು 20 ಲಕ್ಷ ಹದಿಹರೆಯದ ಹೆಣ್ಣು ಮಕ್ಕಳಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸಲಾಗುವುದು ಎಂದು ಹೇಳಿದರು.
ಇನ್ನೂ ಈ ಯೋಜನೆಯ ವೆಚ್ಚದ ಮಾನದಂಡವನ್ನು ಸೂಕ್ತವಾಗಿ ಅಧಿಕಗೊಳಿಸಲಾಗುವುದು ಎಂದರು.





