ನವದೆಹಲಿ: ಯುದ್ಧ ಇಂದು ಮುಗಿಯದೇ ಇರಬಹುದು. ಆದರೆ ನಮ್ಮ ಶಕ್ತಿ ಏನೆಂದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ ಎಂದು ಬಾಲಿವುಡ್ ನಟ ಸಂಜಯ್ ದತ್ ಭಾರತೀಯ ಸೇನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಆಪರೇಷನ್ ಸಿಂಧೂರಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಜನರ ಮೇಲಿನ ನಿರಂತರ ದಾಳಿಗಳನ್ನು ಇನ್ನು ಮುಂದೆ ಸಹಿಸಲ್ಲ. ನಾವು ಹಿಂಜರಿಯದೇ ಪೂರ್ಣ ಬಲದಿಂದ ಮತ್ತು ಅಚಲ ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತೇವೆ. ನಮ್ಮ ಯುದ್ಧ ಜನರು ಅಥವಾ ರಾಷ್ಟ್ರದ ವಿರುದ್ಧವಲ್ಲ. ಭಯ, ಅವ್ಯವಸ್ಥೆ ಮತ್ತು ವಿನಾಶದ ವಿರುದ್ಧ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು. ಈ ಬಾರಿ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ನಮ್ಮ ಯೋಧರು ಕೇವಲ ಗಡಿಗಳನ್ನು ರಕ್ಷಿಸುತ್ತಿಲ್ಲ ಅವರು ಪ್ರತಿ ಮಗುವಿನ ಕನಸು, ಪ್ರತಿ ಕುಟುಂಬದ ಶಾಂತಿ ಹಾಗೂ ಈ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ಅವರು ನಿಜವಾದ ವೀರರು. ಇವರಿಗೆ ನಾನು ಸಲ್ಯೂಟ್ ಹೊಡೆಯುತ್ತೇನೆ ಎಂದು ಹೇಳಿದ್ದಾರೆ.





