ಬೆಂಗಳೂರು : ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಸಂತ್ರಸ್ತನಿಗೆ ಬೆಂಗಳೂರಿನಲ್ಲಿ ಇಂದು ( ಜೂನ್ 23 ) ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಂತ್ರಸ್ತನನ್ನು ಪೊಲೀಸರು ಕರೆದುಕೊಂಡು ಬಂದಿದ್ದು, ಎಫ್‌ಎಸ್‌ಎಲ್ ತಜ್ಞ ಸತೀಶ್‌ರಿಂದ ಮೆಡಿಕಲ್ ಟೆಸ್ಟ್ ನಡೆಸಲಾಯಿತು. ವಿವಿಧ ರೀತಿಯ 15 ಮಾದರಿ ಪರೀಕ್ಷೆಯನ್ನು ಸಂತ್ರಸ್ತನಿಗೆ ಮಾಡಲಾಗಿದ್ದು, ಬಳಿಕ ಸಂತ್ರಸ್ತನಿಂದ ಎಲ್ಲಾ ರೀತಿ ಮಾಹಿತಿಯನ್ನು ವೈದ್ಯರು ಪಡೆದುಕೊಂಡರು. ಯಾವತ್ತು ಘಟನೆ ಆಯ್ತು? ಎಲ್ಲಿ ಆಯ್ತು? ಯಾವ ರೀತಿ ದೌರ್ಜನ್ಯ ಆಯ್ತು ಎಂಬುವುದರ ಬಗ್ಗೆ ಸಂತ್ರಸ್ತನಿಂದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.





