ಮೈಸೂರು : ರೌಡಿ ಶೀಟರ್ ಕಾರ್ತಿಕ್ ಹತ್ಯೆ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸರು ರೌಡಿ ಶೀಟರ್‌ಗಳನ್ನು ಕರೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಜಯನಗರ ಉಪವಿಭಾಗದ ಎಲ್ಲಾ ರೌಡಿಗಳಿಗೂ ಬೆಳ್ಳಂ ಬೆಳಗ್ಗೆಯೇ ಪೆರೇಡ್ ನಡೆಸಿದ ಡಿಸಿಪಿ ಮುತ್ತುರಾಜ್, ಸುಂದರ್ ರಾಜ್ ನೇತೃತ್ವದ ಪೊಲೀಸರು, ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:- ಮೈಸೂರು | ಗಾಂಜಾ ಸಂಗ್ರಹ ; ಮಹಿಳೆ ಪೊಲೀಸ್ ವಶಕ್ಕೆ
ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು, ಸಮಾಜದಲ್ಲಿ ಶಾಂತಿ ಕದಡದಂತೆ, ಸಾರ್ವಜನಿಕರಿಗೆ ತೊಂದರೆ ನೀಡದಂತೆ ಪೆರೇಡ್‌ನಲ್ಲಿ ಭಾಗಿಯಾಗಿದ್ದ ಸುಮಾರು 60 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.





