ನವದೆಹಲಿ: ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿಗೆ ಬೆದರಿದ ಪಾಕಿಸ್ತಾನ ಗೋಗರೆದು ಕದನ ವಿರಾಮ ಮಾಡಿಸಿತ್ತು ಎಂಬ ವಿಚಾರ ತಿಳಿದುಬಂದಿದೆ.
ಭಾರತವು ಮೇ.10ರ ಮುಂಜಾನೆ ಮೊದಲ ಬಾರಿಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಹಾರಿಸಿತ್ತು. ಇನ್ನೊಂದು ದೇಶದ ಮಧ್ಯೆ ಕಾದಾಟ ನಡೆಸುತ್ತಿದ್ದಾಗ ಭಾರತ ಬ್ರಹ್ಮೋಸ್ ಕ್ಷಿಪಣಿಯನ್ನು ಹಾರಿಸಿದ್ದು ಇದೇ ಮೊದಲು.
ಪಾಕಿಸ್ತಾನದ ಪ್ರಮುಖ ವಾಯುನೆಲೆಯನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿತ್ತು. ಭಾರತ ಮೊದಲ ಬಾರಿಗೆ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸ ಮಾಡಿತ್ತು.
ಈ ಸಮಯದಲ್ಲಿಯೇ ಪಾಕಿಸ್ತಾನ ತುರ್ತು ಹಸ್ತಕ್ಷೇಪಕ್ಕಾಗಿ ಅಮೇರಿಕಾದ ಸಹಾಯವನ್ನು ಕೋರಿದೆ. ಪಾಕ್ ನೇರವಾಗಿ ಮೊರೆ ಇಟ್ಟ ಕಾರಣ ಅಧಿಕೃತವಾಗಿ ಮಧ್ಯಪ್ರವೇಶ ಮಾಡಲು ಮುಂದಾಯಿತು.
ಮೇ.10ರ ಮಧ್ಯಾಹ್ನದ ವೇಳೆಗೆ ಪಾಕ್ ಡಿಜಿಎಂಒ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ತಮ್ಮ ಭಾರತ ಡಿಜಿಎಂಒ ಜನರಲ್ ರಾಜೀವ್ ಘಾತ್ ಅವರಿಗೆ ನೇರ ಕರೆ ಮಾಡಿ ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ಕೊನೆಗೆ ಸಂಜೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪತ್ರಿಕಾಗೋಷ್ಠಿಯಲ್ಲಿ ಎರಡು ದೇಶಗಳ ಮಧ್ಯೆ ಕದನವಿರಾಮ ನಡೆದಿರುವ ಬಗ್ಗೆ ದೃಢಪಡಿಸಿದರು.





