Mysore
31
few clouds

Social Media

ಶನಿವಾರ, 15 ಮಾರ್ಚ್ 2025
Light
Dark

ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಗೆದ್ದಾಕ್ಷಣ ಹಗರಣಗಳು ಮುಚ್ಚಿ ಹೋಗಲ್ಲ: ಎಂಎಲ್‌ಸಿ ಎಚ್.ವಿಶ್ವನಾಥ್‌

ಮೈಸೂರು: ಕಾಂಗ್ರೆಸ್‌ ಈ ಬಾರಿಯ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಮಾತ್ರಕ್ಕೆ ಸರ್ಕಾರದ ಹಗರಣಗಳು ಮುಚ್ಚಿ ಹೋಗುವುದಿಲ್ಲ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು(ನ.23) ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದು, ಮತದಾರರು ಕೊಟ್ಟ ತೀರ್ಪಿನಿಂದಲ್ಲ. ಈ ಚುನಾವಣೆ ಹಣ, ಮದ್ಯ ಹಾಗೂ ಶಿಫಾರಸ್ಸು ಮೇಲೆನಿಂತ ಚುನಾವಣೆಯಾಗಿದೆ. ಗೆದ್ದವರು ಬೀಗುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಈಗ ನಡೆದಿರುವ ಹಗರಣಗಳು ಮುಚ್ಚಿ ಹೋಗುವುದಿಲ್ಲ. ಮುಡಾ ಪ್ರಕರಣ ಮೈಸೂರು ವ್ಯಾಪ್ತಿಯದ್ದು, ಹೀಗಾಗಿ ಚನ್ಬಪಟ್ಟಣದಲ್ಲಿ ವರ್ಕ್‌ ಆಗುತ್ತೆ ಅಂದುಕೊಳ್ಳುವುದು ಬೇಡ. ಉಪ ಚುನಾವಣೆಗಳು ಯಾವ ರೀತೊ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

Tags: