Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ಅಮೃತಸರದಲ್ಲಿ ರೆಡ್‌ ಅಲರ್ಟ್‌ ಮುಕ್ತಾಯ: ಸಾಮಾನ್ಯ ಚಟುವಟಿಕೆ ಆರಂಭ

ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಮೃತಸರದಲ್ಲಿ ರೆಡ್‌ ಅಲರ್ಟ್‌ ಮುಕ್ತಾಯಗೊಂಡಿದೆ.

ಕದನ ವಿರಾಮ ಘೋಷಣೆಯಾದ ಬಳಿಕವೂ ಪಂಜಾಬ್‌ನ ಹಲವೆಡೆ ಸೈರನ್‌ ಸದ್ದು ಮೊಳಗಿತ್ತು. ಪಾಕ್‌ ಸೇನೆಯಿಂದ ದಾಳಿಯ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಮೃತಸರದಾದ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿತ್ತು.

ಇದೀಗ ಅಮೃತಸರದಲ್ಲಿ ರೆಡ್‌ ಅಲರ್ಟ್‌ ಮುಕ್ತಾಯಗೊಂಡಿದ್ದು, ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಚಟುವಟಿಕೆ ಪುನರಾರಂಭಗೊಂಡಿದೆ. ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.

Tags:
error: Content is protected !!