ಬೆಂಗಳೂರು: ಇತ್ತೀಚಿನ ದಿನಗಳಲ್ಲಿ OTP ಗಳ ಮೂಲಕ ಹಣ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಕಾರಣ ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಮಾಡಲು ನಿರ್ಧರಿಸಿದೆ.
ಮೊಬೈಲ್‌ಗಳಿಗೆ ಬರುವ ಒಟಿಪಿ (one time password)ಗಳ ಮೂಲ ಪತ್ತೆ ಮಾಡಲು, ಟ್ರಾಯ್ ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮಾವಳಿಗಳಿಗೆ ದೇಶಿಯ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಿದೆ.
ಟ್ರಾಯ್ ನೀಡಿರುವ ಗಡುವಿನೊಳಗೆ ಟೆಲಿಕಾಂ ಕಂಪನಿಗಳು ಒಪ್ಪಿಗೆ ನೀಡದೆ ಇದ್ದರೆ ಡಿಸೆಂಬರ್ 1ರಿಂದ ಮೊಬೈಲ್ ಪೋನ್‌ಗಳಿಗೆ ಒಟಿಪಿಗಳು ಬರುವುದಿಲ್ಲ ಎಂದು ವರದಿಯಾಗಿದೆ.
ಈ ಹಿಂದೆ ಅಕ್ಟೋಬರ್ 31 ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಟೆಲಿಕಾಂ ಕಂಪನಿಗಳ ಕೋರಿಕೆ ಮೇರೆಗೆ ಗಡವು (ನ.30ಕ್ಕೆ) ವಿಸ್ತರಿಸಿತು.
ಮೊಬೈಲ್‌ಗಳಿಗೆ ಬರುವ ಒಟಿಪಿ ವ್ಯವಸ್ಥೆ ನಿಂತುಹೋದರೆ ಆನ್‌ಲೈನ್ ಹಣಕಾಸು ವ್ಯವಹಾರ, ಡಿಜಿಟಲ್ ಬ್ಯಾಂಕಿಂಗ್ ಇನ್ನಿತರ ಸಮಸ್ಯೆಗಳು ಹೆಚ್ಚಾಗಿ ಇದರಿಂದ ಜನರಿಗೆ ತೊಡಕಾಗುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಟ್ರಾಯ್‌ನ ಹೊಸನಿಯಾಮವಳಿಗಳಿಗೆ ಜಿಯೊ, ವೊಡಾಪೋನ್,ಏರ್‌ಟೆಲ್,ಬಿಎಸ್‌ಎನ್‌ಎಲ್ ಇನ್ನು ಹಲವು ಕಂಪನಿಗಳು ಒಪ್ಪಿಗೆ ನೀಡಿಲ್ಲ. ಒಂದು ವೇಳೆ ಈ ಕಂಪನಿಗಳು ತಮ್ಮ ನಿರ್ಧಾರ ತಿಳಿಸದಿದ್ದರೆ ಒಟಿಪಿ ಸೇವೆಯಲ್ಲಿ ವ್ಯತ್ಯಯ ಆಗಬಹುದು ಎನ್ನಲಾಗಿದೆ.