Mysore
18
clear sky

Social Media

ಗುರುವಾರ, 29 ಜನವರಿ 2026
Light
Dark

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮುದ್ರಣ ಮಾಧ್ಯಮ ಚಿರಸ್ಥಾಯಿ: ಕೆ.ವಿ.ಪ್ರಭಾಕರ್

ಮುದ್ರಣ ಮಾಧ್ಯಮದ ಜೊತೆಗೆ ಪತ್ರಿಕಾ ವಿತರಕ ವೃತ್ತಿ ಕೂಡ ಶಾಶ್ವತ: ಕೆ.ವಿ.ಪಿ

ತುಮಕೂರು: ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮುದ್ರಣ ಮಾಧ್ಯಮ ಚಿರಸ್ಥಾಯಿ. ಎಲ್ಲಿಯವರೆಗೂ ಮುದ್ರಣ ಮಾಧ್ಯಮ‌ ಇರುತ್ತದೋ ಅಲ್ಲಿಯವರೆಗೂ ಪತ್ರಿಕಾ ವಿತರಕ ವೃತ್ತಿ ಕೂಡ ಶಾಶ್ವತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.

ರಾಜ್ಯ ಪತ್ರಿಕಾ ವಿತರಕರ ಸಂಘ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪುರಸ್ಕೃತ ವಿತರಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತ್ರಿಕಾ ಕ್ಷೇತ್ರದಲ್ಲಿ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪತ್ರಿಕಾ ವಿತರಕರ ಶ್ರಮವನ್ನು ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತೀ ವರ್ಷ ಒಂದು ಪ್ರಶಸ್ತಿಯನ್ನು ವಿತರಕರಿಗೆ ಮೀಸಲಿಟ್ಟರು. ಕಾರ್ಮಿಕ ಇಲಾಖೆ ವಿತರಕರ ನಿವೃತ್ತಿ ವಯಸ್ಸನ್ನು 59 ವರ್ಷದಿಂದ ಹೆಚ್ಚಿಸಿ 70 ವರ್ಷಕ್ಕೆ ನಿಗಧಿ ಮಾಡಿರುವುದು ಸಚಿವ ಸಂತೋಷ್ ಲಾಡ್ ಅವರ ಕಾಳಜಿಗೆ ಉದಾಹರಣೆ ಎಂದರು.

ಪತ್ರಿಕಾ ವಿತರಕರ ಬದುಕಿಗೆ ಸ್ಪಂದಿಸುವ ವಿಚಾರದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಂಬುಲಿಂಗ ಅವರ ಕಾಳಜಿ ಮತ್ತು ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಜಾ ಪ್ರಗತಿ ಸಂಪಾದಕರಾದ ನಾಗಣ್ಣ, ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು , ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಶಂಬುಲಿಂಗ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:
error: Content is protected !!