ಮೈಸೂರು: ಚಾವಿಸನಿನಿಯು ವಿದ್ಯುತ್ ಸುರಕ್ಷತೆಗೆ ಹಾಗೂ ಗ್ರಾಹಕರ ಸೇವೆಗೆ ಹೆಚ್ಚು ಆದ್ಯತೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ರೈತರು ತಮ್ಮ ಸುತ್ತಮುತ್ತ ಮುರಿದ ಅಥವಾ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು, ಜೋತುಬಿದ್ದಿರುವ ತಂತಿಗಳು, ತುಂಡಾಗುತ್ತಿರುವ ವಿದ್ಯುತ್ ತಂತಿಗಳು, ದುಸ್ಥಿತಿಯಲ್ಲಿರುವ ಪರಿವರ್ತಕ(ಟ್ರಾನ್ಸ್‌ಫಾರ್ಮರ್)ಗಳು ಕಂಡು ಬಂದಲ್ಲಿ ಟೋಲ್ ಫ್ರೀ ಸಂಖ್ಯೆ 1912ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.