Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮೈಸೂರು: ಬೆಮೆಲ್‌ ಅಧಿಕಾರಿ ಆತ್ಮಹತ್ಯೆ

ಮೈಸೂರು: ಇಲ್ಲಿನ ದಟ್ಟಗಳ್ಳಿ ರಿಂಗ್‌ ರಸ್ತೆಯ ಕೆಇಬಿ ವೃತ್ತದ ಸಮೀಪ ನಿರ್ಮಾಣ ಹಂತದ ಕೆಇಬಿ ಸಮುದಾಯ ಭವನದ ವಾಚ್‌ ಮ್ಯಾನ್‌ ಶೆಡ್‌ನಲ್ಲಿ ಬೆಮೆಲ್‌ ಅಧಿಕಾರಿಯೊಬ್ಬರು ಆತ್ಮಹ್ಯತ್ಯೆ ಮಾಡಿಕೊಂಡಿದ್ದಾರೆ.

ಬೋಗಾದಿ ನಿವಾಸಿ, ಬೆಮೆಲ್‌ ಮ್ಯಾನೇಜರ್‌ ಮೋಹನ್(‌54) ಮೃತರು. ಭಾನುವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದ ಮೋಹನ್‌, ಮಧ್ಯಾಹ್ನದವರೆಗೂ ಕುಟುಂಬರವರ ಜೊತೆ ದೂರವಾಣಿ ಸಂಪರ್ಕದಲ್ಲಿದ್ದರು. ಆನಂತರ ಪೋನ್‌ ನಾಟ್‌ ರೀಚಬಲ್‌ ಆಗಿದ್ದರಿಂದ ಕುಟುಂಬದವರು ಗಾಬರಿಗೊಂಡು ಕಚೇರಿಗೆ ಮಾಹಿತಿ ನೀಡಿದರು.

ಬಳಿಕ ಬೆಮೆಲ್‌ ಸಿಬ್ಬಂದಿಗಳು ಖುದ್ದು ಕಾರ್ಯೋನ್ಮುಖರಾಗಿ ಫೋನ್‌ ಟ್ರ್ಯಾಕ್‌ ಹುಡುಕಿ ಹೋದಾಗ ಕೆಇಬಿ ಸಮುದಾಯದ ವಾಚ್‌ ಮ್ಯಾನ್‌ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೋಹನ್‌ ದೇಹಪತ್ತೆಯಾಗಿದೆ.

ಕುವೆಂಪುನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Tags: