Mysore
28
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಒಂದೇ ಒಂದು ಕರೆ ನೀಡಿದ್ರೆ ರಾಜ್ಯಾಂದ್ಯಂತ ಹೋರಾಟ: ದೂರುದಾರ ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಪ್ರಕರಣ ಕುರಿತು ನನ್ನ ಹೋರಾಟವನ್ನು ಆರಂಭದಿಂದಲೂ ಹತ್ತಿಕ್ಕುವ ಕೆಲಸ ನಡೆಯುತ್ತ ಇದೆ. ಕೆಲವರು ನನಗೆ ಕರೆ ಮಾಡಿ ಪ್ರತಿಭಟನೆಗೆ ಸಜ್ಜುಗೊಳ್ಳುವಂತೆ ಹೇಳುತ್ತಿದ್ದಾರೆ. ನಾನು ಪ್ರತಿಭಟನೆಗೆ ಒಂದು ಕರೆ ನೀಡಿದರೆ ಸಾಕು ರಾಜ್ಯಾದ್ಯಂತ ಹೋರಾಟ ಆರಂಭವಾಗುತ್ತದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಅವರು ನೀಡಿದ್ದ ದೂರಿನನ್ವಯ ಇಂದು ದೇವರಾಜ ಪೊಲೀಸ್ ಠಾಣೆಯ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಹಾಜರಾಗಿದ್ದರು.‌ ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಂ.ಲಕ್ಷ್ಮಣ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಎಂ.ಲಕ್ಷ್ಮಣ್‌ಗೆ ಕೋಪ. ಲೋಕಸಭೆ ಚುನಾವಣೆಯಲ್ಲಿ ಸೋತ ಕಾರಣ ಆ ಸೇಡನ್ನು ತೀರಿಸಿಕೊಳ್ಳಲು ಲಕ್ಷ್ಮಣ್‌ ದೂರು ನೀಡಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತರುತ್ತಿದ್ದಾರೆ. ಚುನಾವಣೆಯಲ್ಲಿ ತನನ್ನು ಹರಿಕೆಯ ಕುರಿ ಮಾಡಿದರು ಅಂತ ಸಿಎಂ ವಿರುದ್ದ ಕುಪಿತಗೊಂಡಿರಬಹುದು. ಆಗಾಗಿ ಸಿದ್ದರಾಮಯ್ಯಗೆ ಸಂಕಷ್ಟು ತರುತ್ತಿದ್ದಾರೆ ಎಂದು ದೂರಿದರು.

ಪೊಲೀಸರ ವಿಚಾರಣೆಗೆ ಉತ್ತರ ನೀಡಿದ್ದೇನೆ. ಈ ಪ್ರಕರಣದಲ್ಲಿ ಲಕ್ಷ್ಮಣ್‌ ವಿರುದ್ಧವೇ ಕೇಸ್‌ ಬೀಳಲಿದೆ. ತಮ್ಮ ಹೋರಾಟವನ್ನು ಮೊದಲಿನಿಂದಲೂ ಹತ್ತಿಕ್ಕುವ ಕೆಲಸ ಆಗ್ತಿದೆ. ಜಾಲತಾಣದಲ್ಲಿ ನನ್ನ ಪರ ಅಭಿಮಾನ ಆರಂಭವಾಗಿದೆ. ಕೆಲವರು ಕರೆ ಮಾಡಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ರು. ಒಂದೇ ಒಂದು ಕರೆ ನೀಡದರೆ ರಾಜ್ಯದ್ಯಂತ ಹೋರಾಟ ಆರಂಭವಾಗಲಿದೆ. ನಾನೇ ಯಾವುದು ಬೇಡ ಅಂತ ಸುಮ್ಮನಿದ್ದೇನೆ ಎಂದರು.

Tags:
error: Content is protected !!