Mysore
23
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಎಂ ಇ ಎಸ್ ಪ್ರತಿಭಟನೆ: ಕನ್ನಡಿಗರ ಸಂಭ್ರಮದಲ್ಲಿ ನಾಡದ್ರೋಹಿಗಳಿಂದ ಕರಾಳ ದಿನಾಚರಣೆ

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರ ಮನಸ್ಸು ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಪೊಲೀಸರ ಅನುಮತಿ ಇಲ್ಲದಿದ್ದರೂ ಇತ್ತ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪ್ರತಿ ವರ್ಷದಂತೆ ಕರ್ನಾಟಕ ರಾಜ್ಯೋತ್ಸವದಂದೇ ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು.

ಬೆಳಗಾವಿ, ಬೀದರ, ನಿಪ್ಪಾಣಿ, ಕಾರವಾರ, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಎಂಇಎಸ್ ವತಿಯಿಂದ ನಡೆದ ಕರಾಳ ದಿನಾಚರಣೆಯಲ್ಲಿ ಕಾರ್ಯಕರ್ತರು ಸೇರಿ ಕನ್ನಡಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಿಸಿದ ಸೈಕಲ್ ರ‍್ಯಾಲಿ ಹಾಗೂ ಕಾಲ್ನಡಿಗೆ ರ‍್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ಮರಾಠಾ ಮಂದಿರದಲ್ಲಿ ಸಭೆ ನಡೆಸಿ ಮುಕ್ತಾಯಗೊಳಿಸಿದರು.

ಕರ್ನಾಟಕ ಸರ್ಕಾರ ಸೇರಿದಂತೆ ನಾಡದ್ರೋಹಿ ಘೋಷಣೆಗಳನ್ನು ಕೂಗಿದ ಎಂಇಎಸ್ ಕಾರ್ಯಕರ್ತರ ಕರಾಳ ದಿನಾಚರಣೆ ರ‍್ಯಾಲಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಸೇರಿದಿದ್ದರು. ಏನೂ ಅರಿಯದ ಮುಗ್ಧ ಮಕ್ಕಳ ತಲೆಯಲ್ಲಿಯೂ ನಾಡದ್ರೋಹದ ಬೀಜ ಬಿತ್ತುತ್ತಿರುವುದು ಕನ್ನಡಿಗರನ್ನು ಕೆರಳಿಸಿದೆ. ಚಿಕ್ಕ ಚಿಕ್ಕ ಮಕ್ಕಳು ಕಪ್ಪು ಬಟ್ಟೆ ಧರಿಸಿ, ಕಪ್ಪು ಪಟ್ಟಿ ಕಟ್ಟಿಕೊಂಡು, ಕೈಯಲ್ಲಿ ಕಪ್ಪು ಧ್ವಜ ಹಾಗೂ ಕರ್ನಾಟಕ ಸರ್ಕಾರ ವಿರುದ್ಧದ ಫಲಕಗಳನ್ನು ನೀಡಿದ್ದು ಅಸಹ್ಯ ಎನಿಸುವಂತಿತ್ತು.

ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಧರ್ಮವೀರ ಸಂಭಾಜಿ ವೃತ್ತದಿಂದ ಮುಂದೆ ಸಾಗುವ ಎಲ್ಲ ಮಾರ್ಗಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಎಲ್ಲ ಕಡೆಯೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!