Mysore
22
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ಸೂರ್ಯ ಹಾಗೂ ಜ್ಯೋತಿಕಾ ದಂಪತಿ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಕಾಲಿವುಡ್‌ ಕ್ಯೂಟ್‌ ಜೋಡಿ ಸೂರ್ಯ ಹಾಗೂ ಜ್ಯೋತಿಕಾ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ತಮಿಳು ಸಿನಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸೂರ್ಯ ಹಾಗೂ ಜ್ಯೋತಿಕಾ ಅವರು ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರಿಗೆ ಭೇಟಿ ನೀಡಿದ್ದರು.

ದೇವಾಲಯದಲ್ಲಿ ವಿಶೇಷವಾಗಿ ನಡೆಸುವ ಚಂಡಿಕಾಯಾಗದಲ್ಲಿ ಭಾಗಿಯಾಗಿ, ಮೂಕಾಂಬಿಕಾ ತಾಯಿಯ ದರ್ಶನ ಪಡೆದರು. ಬಳಿಕ ಶಕ್ತಿ ದೇವತೆ ಮೂಕಾಂಬಿಕಾಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ನೆಚ್ಚಿನ ಜೋಡಿ ಸೂರ್ಯ ದಂಪತಿ ಜೊತೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ನಟ ಸೂರ್ಯ ನಟನೆಯ ಕಂಗುವ ಸಿನಿಮಾ ನವೆಂಬರ್‌.14ರಂದು ರಿಲೀಸ್‌ ಆಗಿತ್ತು. ಸೂರ್ಯ ಅವರ ನಟನೆಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಇಂದು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Tags:
error: Content is protected !!