Mysore
21
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಶಬರಿಮಲೆಯಿಂದ ಬರುತ್ತಿದ್ದ ಕರ್ನಾಟಕದ ಬಸ್‌ ಅಪಘಾತ; 27 ಮಂದಿಗೆ ಗಾಯ

ವಯ್‌ನಾಡು: ಶಬರಿಮಲೆಗೆ ತೆರಳಿದ್ದ ಕರ್ನಾಟಕದ ಪ್ರವಾಸಿಗರು ವಾಪಸ್‌ ಆಗುತ್ತಿದ್ದ ವೇಳೆ ಕೇರಳದ ವಯನಾಡು ಸಮೀಪದ ತಿರುವಿನಲ್ಲಿ ಬಸ್ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ 27 ಮಂದಿ ಗಾಯಗೊಂಡಿದ್ದಾರೆ.

ಈ ಅಪಘಾತ ಇಂದು (ನ.19) ಬೆಳಿಗ್ಗೆ 6 ಗಂಟೆಗೆ ಶಬರಿಮಲೆಯಿಂದ ಮೈಸೂರಿನ ಮೂಲಕ ಹುಣಸೂರಿಗೆ ಚಲಿಸುವಾಗ ವಯನಾಡಿನ ಸಮೀಪ ಸಂಭವಿಸಿದ್ದು, ಬಸ್‌ನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರಿದ್ದರೆಂದು ಹೇಳಲಾಗಿದೆ. ಅದರಲ್ಲಿ 27 ಮಂದಿ ಗಾಯಾಳುಗಳಾಗಿದ್ದಾರೆ. ಆ ಗಾಯಾಳುಗಳಲ್ಲಿ ಇಬ್ಬರು ಮಕ್ಕಳು ಸಹ ಇದ್ದು, ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ವಯನಾಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಅಪಘಾತ ಬಗ್ಗೆ ವಯನಾಡು ಕ್ಷೇತದಲ್ಲಿ ಸಂಸದ ಸ್ಥಾನಕ್ಕೆ ಚುನಾವಣಾ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶಬರಿಮಲೆಗೆ ತೆರಳಿದ್ದ ಕರ್ನಾಟಕ ಭಕ್ತರ ಬಸ್‌ ವಯನಾಡ್‌ ಸಮೀಪ ಬಳಿ ಅಪಘಾತಕ್ಕೀಡಾಗಿರುವುದು ನೋವುಂಟು ಮಾಡಿದೆ. ಹೀಗಾಗಿ ಆ ಗಾಯಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

Tags:
error: Content is protected !!