Mysore
25
scattered clouds

Social Media

ಮಂಗಳವಾರ, 27 ಜನವರಿ 2026
Light
Dark

jiohotstar.com ಡೊಮೈನ್ ಉಚಿತವಾಗಿ ರಿಲಯನ್ಸ್‌ಗೆ ವರ್ಗ

ಹೊಸದಿಲ್ಲಿ: jiohotstar.com ಡೊಮೈನ್ ಅನ್ನು ದುಬೈನಲ್ಲಿರುವ ಭಾರತೀಯ ಮೂಲದ ಚಿಣ್ಣರು ರಿಲಯನ್ಸ್‌ಗೆ ಉಚಿತವಾಗಿ ವರ್ಗಾಯಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ ಒತ್ತೀಚೆಗೆ ಒಗ್ಗೂಡಿತ್ತು. ಬಳಿಕ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್‌ ವಿಚಾರವಾಗಿ ಚಿಂತೆಯು ಇತ್ತು. ಇದಕ್ಕೆ ಕಾರಣ ಜಿಯೊ ಮತ್ತು ಡಿಸ್ನಿ+ ಎರಡು ಕಂಪನಿಯ ವಿಲೀನ ಪ್ರಕ್ರಿಯೆ ಮುನ್ನ ದೆಹಲಿ ಮೂಲದ ವಿದ್ಯಾರ್ಥಿಯೊಬ್ಬ jiohotstar.com ಡೊಮೈನ್‌ ಅನ್ನು ಖರೀದಿಸಿದ್ದ. ನಂತರ ಈತ ಉನ್ನತ ವ್ಯಾಸಂಗಕ್ಕೆ ಕೇಳಿದಷ್ಟು ಹಣ ನೀಡಿದರೆ ನಿಮಗೆ ವರ್ಗಾಯಿಸುತ್ತೇನೆ ಎಂದು ರಿಲಯನ್ಸ್‌ ಕಂಪನಿಗೆ ಹಣದ ಬೇಡಿಕೆ ಇಟ್ಟಿದ್ದ.

ಮುಂದಾಗುವ ಸಾವಲುಗಳನ್ನು ಚಿಂತಿಸಿದ ಜಿಯೊ ಕಂಪನಿಯ ಈತನ ಬೇಡಿಕೆಯನ್ನು ತಿರಸ್ಕರಿಸಿತ್ತು. ಆನಂತರ ಆ ವಿದ್ಯಾರ್ಥಿ ದುಬೈನಲ್ಲಿರುವ ಭಾರತ ಮೂಲದ ಜೈನಾಮ್‌ ಜೈನ್(‌13) ಜೈವಿಕಾ ಜೈನ್(10) ಎಂಬ ಚಿಣ್ಣರಿಗೆ jiohotstar.com ಡೊಮೈನ್‌ ಅನ್ನು ಮಾರಿದ್ದ.

ಇದೀಗ ಈ ಚಿಣ್ಣರು jiohotstar.com ಡೊಮೈನ್‌ ಅನ್ನು ರಿಲಯನ್ಸ್‌ ಕಂಪನಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ವಿಡಿಯೊ ಹಂಚಿಕೊಂಡಿರುವ ಅವರು, ರಿಲಯನ್ಸ್‌ ಐಪಿ ಲೀಗಲ್‌ ಟೀಮ್‌ ನಮ್ಮನ್ನು ಸಂಪರ್ಕಿಸಿದೆ. ಈ ಸಂಬಂಧ ಒಪ್ಪಂದಗಳಿಗೆ ಸಹಿಹಾಕಲು ಮುಂಬೈಗೆ ಬರಲಿದ್ದೇವೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಮ್ಮಿಂದ ಅವರಿಗೆ ಸಹಾಯವಾಗಲಿ ಎಂದಷ್ಟೇ ನಾವು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಇಬ್ಬರು ಚಿಣ್ಣರು ದುಬೈನಲ್ಲಿ ಶೈಕ್ಷಣಿಕ ಸಂಬಂಧ ಚಾರಿಟಿ ನಡೆಸುತ್ತಿದದ್ದು, ಸೇವಾ ಆರ್ಮಿ ಎಂಬ ವೆಬ್‌ಸೈಟ್‌ ಅನ್ನು ಸಹ ಇದಕ್ಕಾಗಿ ರೂಪಿಸಿದ್ದಾರೆ.

Tags:
error: Content is protected !!