Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನನ್ನನ್ನು ಸಂಪುಟದಿಂದ ಕಿತ್ತೊಗೆಯುವುದು ಅಸಾಧ್ಯ: ಜಮೀರ್‌ ಅಹ್ಮದ್

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಕ್ಫ್‌ ಆಸ್ತಿ ಸಂಬಂಧ ಸಚಿವ ಜಮೀರ್‌ ಅಹಮದ್‌ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡಿದ್ದರ ಕುರಿತು ಜಮೀರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಜಮೀರ್‌ ಅಹಮದ್‌ ಅವರು ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿದ್ದು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಪ್ರಹ್ಲಾದ್‌ ಜೋಶಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜಮೀರ್‌ ಅಹ್ಮದ್‌ ತಮ್ಮನ್ನು ಸಂಪುಟದಿಂದ ಕಿತ್ತೊಗೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್‌ ಅಹಮದ್‌ ಅವರು ಪ್ರಹ್ಲಾದ್‌ ಜೋಶಿ ಅವರಿಗೆ ರಾಜ್ಯದ ಹಿಂದೂ- ಮುಸ್ಲಿಂ, ಮತೀಯವಾದ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ಗೊತ್ತಿಲ್ಲ. ಸಂಪುಟದಿಂದ ನನ್ನನ್ನು ತೆಗೆಯಲು ಸಾಧ್ಯವಿಲ್ಲ ಎಂದು ತಿರಗೇಟು ನೀಡಿದರು.

ಭಾರತ ಒಂದು ಜಾತ್ಯಾತೀತ ದೇಶ, ನಾವೆಲ್ಲರೂ ಭಾರತೀಯರು. ಪ್ರಹ್ಲಾದ್‌ ಜೋಶಿಯವರು ಜಾತಿ ರಾಜಕಾರಣ ಮಾಡಬಾರದು, ʼಮುಸ್ಲಿಂರು ಬಿಜೆಪಿ ವಿರುದ್ಧ ಮತ ಹಾಕುವ ಕಾರಣ ಸಮಯ ಸಿಕ್ಕಾಗಲೆಲ್ಲ ಈ ರೀತಿ ಮಾತನಾಡುತ್ತಾ ರಾಜ್ಯದ ಹಿಂದೂ-ಮುಸ್ಲಿಂರ ನಡುವೆ ಬಿರುಕು ಮೂಡಿಸುತ್ತಾರೆʼಎಂದರು.

ರಾಜ್ಯದಲ್ಲಿ ಉಪಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ವಕ್ಫ್‌ ಆಸ್ತಿ ವಿಷಯ ಮುನ್ನಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.

ವಕ್ಫ್‌ ಬೋರ್ಡ್ ನಲ್ಲಿ ೨೩ ಸಾವಿರ ಎಕರೆ ಜಾಗ ಇದ್ದು. ೮೪ ಸಾವಿರ ಎಕರೆ ಒತ್ತುವರಿ ಆಗಿದೆ. ವಕ್ಪ್‌ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ಧೇಶದಿಂದ ಅದರ ತೆರವಿಗೆ ವಕ್ಫ್‌ ಆದಾಲತ್‌ ನಡೆಸುತ್ತಿದ್ದೇವೆ, ಸರ್ಕಾರದ ಒಂದು ಇಂಚು ಜಾಗವನ್ನು ಪಡೆದಿಲ್ಲ ಎಂದು ಹೇಳಿದರು.

ವಿಜಯಪುರದಲ್ಲಿ ಈ ಆಸ್ತಿ ವಿಷಯವಾಗಿ ಬಿಜೆಪಿಯವರು ರೈತರನ್ನು ಎತ್ತಿಕಟ್ಟುತ್ತಿದ್ದಾರೆ. ವಕ್ಫ್‌ ಆಸ್ತಿ ಸಂಬಂಧ ಸೂಕ್ತವಾದ ಎಲ್ಲಾ ದಾಖಲೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ ಎಂದರು.

Tags: