Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕದನ ವೀರ ಚಲನಚಿತ್ರಕ್ಕೆ ಶುಭ ಹಾರೈಸಿದ ರಾಜ್ಯಪಾಲ ವಿಜಯಶಂಕರ್‌, ಯದುವೀರ್

ಮೈಸೂರು: ಮೇಘಾಲಯ ರಾಜ್ಯಪಾಲರಾದ ಸಿ ಹೆಚ್ ವಿಜಯಶಂಕರ್ ಹಾಗೂ ಸಂಸದ ಯದುವೀರ್ ರ್ಯೋಧರ ತ್ಯಾಗ, ಬಲಿದಾನ ಹಾಗೂ ಶೌರ್ಯದ ಕುರಿತು ನಿರ್ಮಾಣವಾಗಿರುವ ಕದನ ವೀರ ಚಲನ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ
ಶುಭ ಹಾರೈಸಿದರು.

ಕದನ ವೀರ ಚಲನ ಚಿತ್ರ ಇದೆ 1ನೇ ಸೆಪ್ಟೆಂಬರ್ (ಭಾನುವಾರ) ಕರ್ನಾಟಕ ಕಲಾ ಮಂದಿರ ನಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 5 ಪ್ರದರ್ಶನ ಇರಲಿದೆ.  ಜೊತೆಗೆ ಚಿತ್ರದ ಟ್ರೇಲರ್ ನ್ನೂ YouTube channel Sainik Academy Mysuru ನಲ್ಲಿ ವೀಕ್ಷಿಸಬಹುದು, ಪೂರ್ತಿ ಚಲನ ಚಿತ್ರವನ್ನು ಇನ್ನೇನು ಕೆಲವೇ ದಿನಗಳಲ್ಲಿ ಮೇಲ್ಕಂಡ YouTube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗುವುದು.

ಯೋಧರ ತ್ಯಾಗ, ಬಲಿದಾನ, ಶೌರ್ಯದ ಬಗ್ಗೆ ನಿರ್ಮಾಣ ಆಗಿರುವ ಕದನ ವೀರ ಚಲನ ಚಿತ್ರವನ್ನು  ಸೈನಿಕ ಅಕಾಡೆಮಿ (ರಿ) ಮೈಸೂರು ವತಿಯಿಂದ ನಿರ್ಮಾಣ ಮಾಡಲಾಗಿದೆ.  ಒಂದು ವರ್ಷಗಳ ಸತತ ಪ್ರಯತ್ನ ಪರಿಶ್ರಮದಿಂದ SAM ಸಂಸ್ಥಾಪಕರು ಮತ್ತು ಎಕ್ಸ್ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಶ್ರೀಧರ ಸಿ ಎಂ ರವರ ಪ್ರೋತ್ಸಾಹದಿಂದ, ಸೈನಿಕರ ಮೇಲೆ ಅಪಾರ ಅಭಿಮಾನ ಇರುವ SAM ನ ಅಭ್ಯರ್ಥಿ ಜೀವನ ಚಿಕ್ಕಬಂಡಾರ ಅವರ ನಿರ್ದೇಶನ ಹಾಗೂ ನಿರ್ಮಾಪಕ ಅನಿತಾ ಶ್ರೀಧರ ಅವರ ಸಹಕಾರದಿಂದ ಈ ಚಿತ್ರ ಮೂಡಿಬಂದಿದೆ.

ನನ್ನ ಮಣ್ಣು, ನನ್ನ ಜಲ, ನನ್ನ ಗಾಳಿ, ನನ್ನ ಜನ, ದೇಶ ಎಂಬ ಕಿಚ್ಚು ಯುವಪೀಳಿಗೆಗೆ, ಪೋಷಕರಿಗೆ ಹೆಚ್ಚಿಸಬೇಕೆಂಬ ಸೈನಿಕರ ತ್ಯಾಗ ಬಲಿದಾನ ಪ್ರತಿಯೊಬ್ಬರೂ ತಿಳಿಯಬೇಕು, ಸೈನಿಕರ ಸಾಹಸ ಸಾಧನೆಯು ಶಾಲೆಯ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸಬೇಕು, ತನಗಾಗಿ ಅಲ್ಲ, ತನ್ನವರಿಗಾಗಿ ಸೇವೆ ಮಾಡುತ್ತಿರುವ ಸೈನಿಕನಿಗೆ ಅಪಾರ ಗೌರವ ಸಿಗಬೇಕು, ಸೈನಿಕರಿಗೆ ಉತ್ಸಾಹ ಧೈರ್ಯ ಹೆಚ್ಚಿಸುವ ಕೆಲಸ ನಾವುಗಳು ಮಾಡಬೇಕೆಂಬ ಉದ್ದೇಶದಿಂದ ಈ ಚಲನ ಚಿತ್ರವನ್ನು SAM ಭವಿಷ್ಯದ ಸೈನಿಕರಿಂದಲೇ ನಿರ್ಮಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

Tags: