Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಗಯಾನಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಜಾರ್ಜ್‌ಟೌನ್‌(ಗಯಾನಾ): ಗಯಾನಾದ ಜಾರ್ಜ್‌ಟೌನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಭಾರತದ ಪ್ರಧಾನಿಯೊಬ್ಬರು 56 ವರ್ಷಗಳ ನಂತರ ಭೇಟಿ ನೀಡಿದಂತಾಗಿದೆ.

ಜಾರ್ಜ್‌ಟೌನ್‌ಗೆ ಇಂದು ಭೇಟಿ ನೀಡಿರುವ ನರೇಂದ್ರ ಮೋದಿ ಅವರನ್ನು ಗಯಾನಾ ಅಧ್ಯಕ್ಷ ಮೊಹಮದ್‌ ಇರ್ಫಾನ್‌ ಅಲಿ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮೋದಿ ಅವರು ಬ್ರೆಜಿಲ್‌ನಲ್ಲಿ ಎರಡು ದಿನಗಳ ಕಾಲ ನಡೆದ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು. ಇದೀಗ ಜಾರ್ಜ್‌ಟೌನ್‌ಗೆ ಭೇಟಿ ನೀಡಿದ್ದು, ಭಾರತ-ಕೆರಿಕಮ್‌ (ಕೆರಿಬಿಯನ್‌ ಕಮ್ಯುನಿಟಿ) ಶೃಂಗಸಭೆಯಲ್ಲಿ ಮೊಹಮ್ಮದ್‌ ಇರ್ಫಾನ್‌ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಗಯಾನಾ ಸಂಸತ್ತಿನಲ್ಲಿ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಉಭಯ ದೇಶಗಳೊಂದಿಗೆ ಸ್ನೇಹದಿಂದ ವ್ಯಾಪಾರ ವಹಿವಾಟು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ಮುಂದುವರಿಸಲಿದ್ದಾರೆ.

 

Tags: