ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಮಾರ್ಚ್.3ರ ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಭಕ್ತಾದಿಗಳು ಎಂದಿನಂತೆ ದರ್ಶನ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಮಧ್ಯಾಹ್ನ 3:50 ನಿಮಿಷದಿಂದ ಸಂಜೆ 6 ಗಂಟೆ 40 ನಿಮಿಷದವರೆಗೆ ಚಂದ್ರಗ್ರಹಣವಿದ್ದರೂ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ವೇಳೆಯಲ್ಲಿಯೂ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ತಮ್ಮ ಹರಕೆ ಕಾಣಿಕೆಗಳನ್ನು ಸಮರ್ಪಿಸಬಹುದು ಎಂದು ತಿಳಿಸಿದರು.
ಚಂದ್ರ ಗ್ರಹಣ ಮುಗಿದ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದ ಆವರಣವನ್ನು ಶುದ್ಧೀಕರಿಸಿ ವಿಶೇಷ ಪೂಜೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ವೇಳೆ ದೇವಸ್ಥಾನದ ಆಗಮಿಕರಾದ ಕರವೀರಸ್ವಾಮಿ, ಪಾರು ಪತ್ತೆದಾರರಾದ ಮಹಾಲಿಂಗನಕಟ್ಟೆ ಮಹಾದೇವಸ್ವಾಮಿ ರಾಜಶೇಖರ್ ಹಾಜರಿದ್ದರು.





