ತಂಗಂ ಜಿ. ಗೋಪಿನಾಥಂ
ಮೈಸೂರು: ದಶಕಗಳ ಹಿಂದೆ ಧುಮ್ಮಿಕ್ಕಿ ಹರಿಯುವ ನದಿಗಳು, ಹೊಳೆಗಳು, ಜಲಪಾತಗಳಲ್ಲಿ ಅಪಾಯದ ಸ್ಥಳದಲ್ಲಿ ಈಜುವುದಕ್ಕಾಗಿ ಧುಮುಕದಂತೆ -ಲಕಗಳನ್ನು ಅಳವಡಿಸುವ ಮೂಲಕ ಎಚ್ಚರಿಕೆ ಕೊಡಲಾಗುತ್ತಿತ್ತು. ಕದ್ದುಮುಚ್ಚಿ ನೀರಿಗೆ ಇಳಿದು ಕೊಚ್ಚಿ ಹೋದರೆ ಮತ್ತೆ ಮತ್ತೆ ಎಚ್ಚರಿಕೆ ಕೊಡುತ್ತಿದ್ದರು. ಇತ್ತೀಚೆಗೆ ಕಾವಲುಗಾರರನ್ನು ನಿಯೋಜಿಸಿ ಎಚ್ಚರಿಕೆ ವಹಿಸುತ್ತಾರೆ.
ನದಿ ಅಥವಾ ಹೊಳೆಗಳು ಇರದ ನಗರ ಪ್ರದೇಶಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಈಜುಕೊಳ ನಿರ್ಮಿಸಿ ಜನರನ್ನು ಆಕರ್ಷಿಸುತ್ತಾರೆ. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ವತಿಯಿಂದ ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳ ನಿರ್ಮಿಸುತ್ತಾರೆ. ಆದರೆ, ಸರಿಯಾದ ಸುರಕ್ಷತಾ ಕ್ರಮಗಳು ಇಲ್ಲದಿದ್ದರೆ ಈಜುಕೊಳ ಕೂಡ ಜನರ ಪ್ರಾಣಕ್ಕೆ ಸಂಚಕಾರ ತರುತ್ತವೆ. ಅದಕ್ಕೆ ಜ್ವಲಂತ ಉದಾಹರಣೆ ಎಂದರೆ ಮಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಈಜಲು ಹೋಗಿ ಮೈಸೂರಿನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮುಳುಗಿ ಸಾವಿಗೀಡಾದ ಪ್ರಕರಣ. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಈಜು ಹೊಡೆಯಲು ಹೋಗುವವರು ಶ್ರೀಮಂತ ವರ್ಗದವರೇ ಆಗಿದ್ದರೂ ಸುರಕ್ಷತೆಯ ಕಾರಣಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎನ್ನುವುದು ಮುಖ್ಯವಾಗಿದೆ. ನಗರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಸರಸ್ವತಿಪುರಂ ಈಜುಕೊಳ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿರುವ ಚಾಮುಂಡಿವಿಹಾರ ಕ್ರೀಡಾಂಗಣದ ಈಜುಕೊಳ ಹೊರತುಪಡಿಸಿದರೆ ಉಳಿದೆಲ್ಲವೂ ಪಂಚತಾರಾ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲೇ ಇವೆ. ಅದರಲ್ಲೂ ಪಂಚತಾರಾ ಹೋಟೆಲ್ ಗಳಲ್ಲಿ ಈಜುಕೊಳ, ಸ್ಪಾ, ಜಿಮ್, ಬಾರ್, ಲಾಂಜ್ ಇರುವ ಕಡೆಗಳಿಗೆ ಹೋಗುವವರು ಅಂದರೆ ಪ್ರತಿಷ್ಠಿತ ವ್ಯಕ್ತಿಗಳೇ ಎನ್ನುವುದು ಮುಖ್ಯ.
ಒಂದು ಅಂದಾಜಿನ ಪ್ರಕಾರ ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಈಜುಕೊಳದಲ್ಲಿ ವಿಹರಿಸುವವರ ಪ್ರಮಾಣ ಎರಡು ಸಾವಿರಕ್ಕೂ ಹೆಚ್ಚಾಗಿದೆ. ಪಂಚತಾರಾ ಮಾನ್ಯತೆ ಹೊಂದಿರುವ ಹೋಟೆಲ್‌ವೊಂದರಲ್ಲಿ ದಿನಕ್ಕೆ ೮೦ ಮಂದಿ ಕೊಳದ ನೀರಿನಲ್ಲಿ ಈಜಿ ಖುಷಿಪಡಲು ಬರುತ್ತಾರೆ. ಸಾಮಾನ್ಯವಾಗಿ ಇವರಿಗೆ ಈಜುವುದು ಗೊತ್ತಿರುತ್ತದೆ. ಆದರೆ, ಈಜಲು ಬಾರದೆ ಕೊಳದಲ್ಲಿ ಮುಳುಗಿ ಮೃತಪಟ್ಟಿರುವ ಅನೇಕ ಪ್ರಕರಣಗಳಿವೆ. ಹಾಗಾಗಿಯೇ, ಖಾಸಗಿ ಹೋಟೆಲ್‌ಗಳ ಈಜುಕೊಳಗಳಲ್ಲಿ ಇರಬಹುದಾದ ಸುರಕ್ಷತೆ, ಅಭದ್ರತೆ ಮತ್ತು ಅಪಾಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿರುವ ಈಜು ಕೊಳದ ಸುರಕ್ಷತೆ ಬಗ್ಗೆ ಪರಿಶೀಲಿಸಲು ‘ಆಂದೋಲನ’ ತೆರಳಿದಾಗ, ಒಂದಿಷ್ಟು ಮಾಹಿತಿ ದೊರೆತರೂ ಸುರಕ್ಷತೆ ಕುರಿತು ಮಾತ್ರ ಸಿಬ್ಬಂದಿ ಸೊಲ್ಲೆತ್ತಲಿಲ್ಲ. ಇಲ್ಲಿಗೆ ಬರುವವರೆ ಲ್ಲರೂ ಶ್ರೀಮಂತರೇ ಸರ್. ಕಾರಲ್ಲಿ ಬರುತ್ತಾರೆ, ಹೋಗುತ್ತಾರೆ. ಅವರೆಲ್ಲ ಈಜು ಕಲಿತಿದ್ದಾರೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ನಮ್ಮಲ್ಲಿ ಮಾತ್ರ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುವ ಮಾತನ್ನು ಹೇಳುತ್ತಾರೆ. ಹೋಟೆಲ್, ರೆಸಾರ್ಟ್‌ಗಳ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿರುತ್ತದೆ. ಕೆಲವು ಹೋಟೆಲ್‌ಗಳಲ್ಲಿ ನಾಲ್ಕು, ಆರು ಅಡಿ ಆಳ ಇದ್ದರೆ, ಕೆಲವೆಡೆ ೮ ಅಡಿ ಆಳ ಇರುತ್ತದೆ. ಮಕ್ಕಳಿಗೆ ಪ್ರತ್ಯೇಕವಾಗಿ ಈಜುಕೊಳ ನಿರ್ಮಾಣ ಮಾಡಲಾಗಿರುತ್ತದೆ. ಈಜಾಡಿ ಬಂದು ವಿರಮಿಸಲು ಕೊಳದ ಸುತ್ತಲೂ ಕುರ್ಚಿ, ಬೆಂಚ್‌ಗಳನ್ನು ಹಾಕಿದ್ದರೆ, ಬಲೂನು, ಟ್ಯೂಬ್‌ಗಳನ್ನು ಇಡಲಾಗುತ್ತದೆ.
ಹೋಟೆಲ್‌ಗಳಲ್ಲಿ ನಿತ್ಯ ಈಜು ಹೊಡೆಯಲು ಬರುವವರಿಗೆ ಲೈ- ಗಾರ್ಡ್‌ಗಳ ಸಹಾಯ ಅಗತ್ಯ ಇರುವುದಿಲ್ಲ. ಮಕ್ಕಳು ಅಥವಾ ಹೊಸಬರು ಬಂದಾಗ ಒಂದಿಷ್ಟು ಮಾಹಿತಿ ಕೊಡುತ್ತಾರೆ. ಈಜು ಬಾರದೆ ಇದ್ದರೆ ಟ್ಯೂಬ್‌ಗಳನ್ನು ಧರಿಸಿ ಇಳಿಯುವಂತೆ ಸೂಚನೆ ಕೊಡಲಾಗುತ್ತದೆ. ಮಕ್ಕಳು ಇಳಿಯಲು ಬಯಸಿದರೆ ನಾಲ್ಕು ಅಡಿಯಲ್ಲಿ ಮಾತ್ರ ಸ್ವಿಮ್ಮಿಂಗ್ ಮಾಡಬೇಕಿದೆ.
ತರಬೇತಿ ಈಜುಕೊಳದಲ್ಲಿ ಬಟ್ಟೆ ಬದಲಿಸಲು ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಕೊಠಡಿ, ಟಿಕೆಟ್ ಕೌಂಟರ್, ಸ್ಟೋರ್
ರೂಮ್, ಮಕ್ಕಳು ಈಜುವುದನ್ನು ವೀಕ್ಷಿಸಲು ಅವರ ಪೋಷಕರಿಗೆ ಸುತ್ತಲೂ ಗ್ಯಾಲರಿ ಇರುತ್ತದೆ. ಆದರೆ, ಹೋಟೆಲ್‌ನಲ್ಲಿರುವ ಈಜುಕೊಳಗಳು ಮನರಂಜನೆ ಮತ್ತು ಸಮಯ ಕಳೆಯುವುದಕ್ಕೆ ಮಾತ್ರ ಇರುವ ಕಾರಣ ಇಂತಹವುಗಳಿಂದ ವಿನಾಯಿತಿ ಇರುತ್ತದೆ.
ಈಜುಕೊಳದಲ್ಲಿ ಅನುಸರಿಸಬೇಕಾದ ಕ್ರಮಗಳೇನು?
೧. ಈಜುಕೊಳದಲ್ಲಿ ನೀರಿನ ಮಟ್ಟ ವನ್ನು ಕೊಳದ ಎರಡೂ ಬದಿಯಲ್ಲಿ ನಮೂದಿಸಬೇಕು.
೨. ಈಜು ಕೊಳಕ್ಕೆ ಇಳಿಯುವ ಮುನ್ನ ಕಡ್ಡಾಯವಾಗಿ ಸ್ನಾನ ಮಾಡಿ ಸ್ವಚ್ಛವಾಗಿರಬೇಕು.
೩. ಈಜುಗಾರರು ಕಡ್ಡಾಯವಾಗಿ ಪಾರದರ್ಶಕವಲ್ಲದ ಈಜು ಉಡುಪನ್ನು ಧರಿಸಬೇಕು.
೪. ಉದ್ದ ತಲೆಗೂದಲು ಇರುವ ವರು ಟೋಪಿಯನ್ನು ಧರಿಸ ಬೇಕು. ಈಜು ತರಬೇತು ದಾರರು ಮತ್ತು ಜೀವರಕ್ಷಕರ ಉಪಸ್ಥಿತಿಯಲ್ಲಿ ಈಜು ಕೊಳಕ್ಕೆ ಇಳಿಯಬೇಕು.
೫. ಈಜುಗಾರರು ನಿಯಮ ಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಈಜುಕೊಳಕ್ಕೆ ಪ್ರವೇ ಶಿಸುವ ಮೊದಲು ನೀರಿನ ಆಳವನ್ನು ಗಮನಿಸಬೇಕು.
೬. ಟ್ಯೂಬ್, ಸ್ಟೀಕ್ ಸೇರಿದಂತೆ ಇತರೆ ಜೀವ ರಕ್ಷಣೆ ಮಾಡುವ ಸಲಕರಣೆಗಳ ವ್ಯವಸ್ಥೆ ಇರಬೇಕು.