ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಇಂದು ಮತ್ತೆ ಕಳಪೆ ಮಟ್ಟಕ್ಕೆ ಕುಸಿತ ಕಂಡಿದೆ.
ಇಂದು ಬೆಳಿಗ್ಗೆ ಸೂಚ್ಯಂಕವು 313ಕ್ಕೆ ತಲುಪಿದ್ದು ಅಪಾಯದ ಸ್ಥಿತಿ ಮುಂದುವರಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.
ಇನ್ನು ನಿನ್ನೆ ಬೆಳಿಗ್ಗೆ ಸೂಚ್ಯಂಕ 301 ದಾಖಲಾಗಿತ್ತು. ಆದರೆ ನಿನ್ನೆಗಿಂತ ಇಂದು ವಾಯು ಗುಣಮಟ್ಟ ಸಂಪೂರ್ಣ ಕಳಪೆಯಾಗಿದೆ.
ಕಳೆದ ಎರಡು ವಾರಗಳಿಂದ ವಾಯು ಗುಣಮಟ್ಟ ತೀವ್ರ ಅಪಾಯಕಾರಿ ಹಂತಕ್ಕೆ ತಲುಪಿದೆ. ಅದಾಗಿಯೂ ದೆಹಲಿ ಸರ್ಕಾರ ವಾಯು ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.





