ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆ ಆವರಣದಲ್ಲಿ ʼಬೆಂಗಳೂರು ಟೆಕ್ ಶೃಂಗ ಸಭೆ 2024ಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದರು.
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ಇದು, ರಾಷ್ಟ್ರಗಳು, ಉದ್ಯಮ ವಲಯಗಳು, ಮತ್ತು ಸಂಸ್ಕೃತಿಗಳ ನಡುವೆ ಇರುವ ಅಡೆತಡೆಗಳನ್ನು ನಿವಾರಿಸಲು ಉತ್ತಮ ವೇದಿಕೆಯಾಗಲಿದೆ.
ಈ ಬಾರಿಯ ಶೃಂಗದ ವಿಷಯ ʼಬ್ರೇಕಿಂಗ್ ಬೌಂಡರೀಸ್ʼ ಅನ್ನು ನವೀಕರಿಸಿ ʼಅನ್‌ಬೌಂಡ್ʼ ಹಂತಕ್ಕೆ ಹೇರಿಸುವುದಾಗಿದೆ.
ಜಾಗತಿಕ ಐಟಿ ಮತ್ತು ಡೀಪ್‌ಟೆಕ್, ಲೈಫ್‌ಟೆಕ್ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳು ಹಾಗೂ ಕೈಗಾರಿಕೆಗಳು ಸೇರಿದಂತೆ ಸಂಪೂರ್ಣ ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ಏಕೀಕೃತ ವೇದಿಕೆ ನಿರ್ಮಿಸುವುದಕ್ಕಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.





