Mysore
23
haze

Social Media

ಶನಿವಾರ, 24 ಜನವರಿ 2026
Light
Dark

ಕದನ ವಿರಾಮ: ಇಂದು ಭಾರತ-ಪಾಕ್‌ ನಡುವೆ ಮಹತ್ವದ ಮಾತುಕತೆ

ನವದೆಹಲಿ: ಭಾರತ ಮತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇಂದು ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ ಸಭೆ ನಡೆಯಲಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಮಹತ್ವದ ಚರ್ಚೆಗಳಾಗುವ ಸಾಧ್ಯತೆಗಳಿವೆ. ಭಾರತ ಡಿಜಿಎಂಒ ಹಾಗೂ ಲೆಫ್ಟಿನೆಂಟ್‌ ಜನರಲ್‌, ಪಾಕ್‌ನ ಡಿಜಿಎಂಒ ಮೇಜರ್‌ ಜನರಲ್‌ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮೇ.‌10ರಂದು ಅಮೇರಿಕಾ ಮಧ್ಯಸ್ಥಿಕೆ ಮೂಲಕ ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸಿದ್ದವು. ಆ ಬಳಿಕವೂ ಪಾಕ್‌ ಸೇನೆ ಮತ್ತೆ ಜಮ್ಮು-ಕಾಶ್ಮೀರದಲ್ಲಿ ಡ್ರೋನ್‌ ದಾಳಿ ನಡೆಸಿತ್ತು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಸೇನೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮುಂದುವರಿಸಿ ತಕ್ಕ ಉತ್ತರ ನೀಡಿತ್ತು. ಈ ಮಧ್ಯೆ ನಿನ್ನೆಯಿಂದ ಪಾಕ್‌ ದಾಳಿ ನಿಲ್ಲಿಸಿದ್ದು, ಇಂದು ಉಭಯ ದೇಶಗಳ ನಡುವಿನ ಮಾತುಕತೆ ನಡೆಯಲಿದೆ. ಇಂದಿನ ಮಾತುಕತೆ ಬಳಿಕವೇ ಭಾರತ ಮುಂದಿನ ನಡೆ ನಿರ್ಧರಿಸಲಿದೆ.

Tags:
error: Content is protected !!