ಮಂಡ್ಯ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಿಪಿವೈ ಪತ್ನಿ ಶೀಲಾ ಅವರಿಂದು ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಚುನಾವಣೆ ನಡೆಯುವುದಕ್ಕಿಂತಲೂ ಮುಂಚೆ ದೇವಾಲಯಕ್ಕೆ ಭೇಟಿ ನೀಡಿದ್ದ ಶೀಲಾ ಅವರು ಯೋಗೇಶ್ವರ್ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದರು.
ಅದರಂತೆ ಇಂದು ದೇವಸ್ಥಾನಕ್ಕೆ ಬಂದು ಹೊಳೆ ಆಂಜನೇಯನಿಗೆ ಒಂದೂಕೂಲು ರೂಪಾಯಿ ಕಟ್ಟಿ ಹರಕೆ ತೀರಿಸಿದ್ದಾರೆ. ಬಳಿಕ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಮಾತನಾಡಿದ ಶೀಲಾ ಯೋಗೇಶ್ವರ್ ಅವರು, ಕಷ್ಟದ ಸಂದರ್ಭದಲ್ಲಿ ಮಾತೃ ಪಕ್ಷ ಕೈಹಿಡಿಯಿತು. ಚನ್ನಪಟ್ಟಣ ಜನರ ಆಶೀರ್ವಾದದಿಂದ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.