ಅರ್ಲಿಂಗ್ಟನ್: ಅಮೇರಿಕಾದ ಟೆಕ್ಸಾಸ್‌ನಲ್ಲಿ ಶನಿವಾರ(ನ.16) ನಡೆದ ಬಾಕ್ಸಿಂಗ್ ಪಂದ್ಯದಲ್ಲಿ 27 ವರ್ಷದ ಜಾಕ್ ಪೌಲ್ ವಿರುದ್ಧ ಮೈಕ್ ಟೈಸನ್ ಸೋತುಹೋದರು. ಬಳಿಕ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ತಮ್ಮ ವೃತ್ತಿಯ ವಿದಾಯದ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷದ ಜುಲೈ 20 ರಂದು ಮೈಕ್ ಟೈಸನ್ ಮತ್ತು ಜಾಕ್ ಪೌಲ್ ನಡುವೆ ನಡೆಯಬೇಕಿದ್ದ ಪಂದ್ಯ ಟೈಸನ್ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಆ ಸಮಯದಲ್ಲಿ ನಾನು ಸಾಯುವ ಅಂತ ತಲುಪಿದ್ದೆ, ಅನೇಕ ಬಾರಿ ರಕ್ತ ವರ್ಗಾವಣೆಯ ಕಾರಣದಿಂದ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು ಎಂದು ಜಾಕ್ ಪೌಲ್ ವಿರುದ್ಧ ಸೋತ ನಂತರ ಸಾಮಾಜಿಕ ಜಾಲತಾಣದಲ್ಲಿ ಟೈಸನ್ ಹೇಳಿಕೊಂಡಿದ್ದಾರೆ.
ಮೇ ತಿಂಗಳಲ್ಲಿ ನಾನು ಸರಿಯಾದ ದೈಹಿಕ ಆಕಾರದಲ್ಲಿದ್ದೆ. ಹುಣ್ಣು ಇದೆ ಎಂದು ಗೊತ್ತಾದ ನಂತರ ಎಲ್ಲವನ್ನೂ ಕಳೆದುಕೊಂಡೆ. ಎಂಟು ಬಾರಿ ರಕ್ತ ವರ್ಗಾವಣೆ ಆಗಿದೆ. ರಕ್ತ ಮತ್ತು 25 ಪೌಂಡುಗಳನ್ನು ಕಳೆದುಕೊಂಡೆ. ಆದರೂ ನನ್ನ ಅರ್ಧಪ್ರಾಯದ ಜಾಕ್ ಪೌಲ್ ಜೊತೆ ಹೊರಾಡಿ ಎಂಟು ಸುತ್ತು ಬಂದಿದ್ದಕ್ಕೆ ಖುಷಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.