Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

BJP ಉದ್ದೇಶಪೂರ್ವಕವಾಗಿ ಮಣಿಪುರವನ್ನು ಸುಡಲು ಬಯಸುತ್ತಿದೆ: ಖರ್ಗೆ

ಹೊಸದಿಲ್ಲಿ: ಮಣಿಪುರದಲ್ಲಿ ಹಿಂಸಚಾರವು ಮತ್ತೆ ಭುಗಿಲೆದ್ದಿದೆ. ಇದಕ್ಕೆ ಡಬಲ್‌ ಇಂಜಿನ್ ಸರ್ಕಾರದ ದ್ವೇಷಪೂರಿತ ಇಬ್ಬಗೆಯ ರಾಜಕಾರಣವೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ‌ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿಯೇ ಮಣಿಪುರವನ್ನು ಸುಟ್ಟು ಹಾಕಲು ಬಯಸುತ್ತಿದೆ. ಮಣಿಪುರಣದ ಜನರ ದುಃಖವನ್ನು ನಿವಾರಿಸಲು ಮೋದಿ ಎಂದಿಗೂ ಅಲ್ಲಿಗೆ ಕಾಲಿಡಲಿಲ್ಲ. ಇದನ್ನು ಮಣಿಪುರದ ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಖರ್ಗೆ, ನರೇಂದ್ರ ಮೋದಿ ಅವರೇ, ನಿಮ್ಮ ಡಬಲ್‌ ಎಂಜಿನ್‌ ಸರ್ಕಾರದಲ್ಲಿ, ಮಣಿಪುರ ಒಂದಾಗಿಲ್ಲ. 2023ರಿಂದ ರಾಜ್ಯದಲ್ಲಿ ಉಂಟಾಗಿರುವ ಹಿಂಸೆಯು ಅಲ್ಲಿನ ಜನರು ತುಂಬಾ ನೋವು ಅನುಭವಿಸುವಂತೆ ಮಾಡಿದೆ. ಇದು ಅಲ್ಲಿನ ಜನರ ಭವಿಷ್ಯವನ್ನೇ ನಾಶಪಡಿಸಿದೆ ಎಂದು ಬರೆದುಕೊಂಡಿದ್ದಾರೆ.

 

Tags:
error: Content is protected !!