Mysore
19
few clouds

Social Media

ಶನಿವಾರ, 31 ಜನವರಿ 2026
Light
Dark

ʼಆಪರೇಷನ್‌ ಸಿಂದೂರʼ ಯಶಸ್ವಿ ಹೇಗಾಗುತ್ತದೆ : ಭೂಪೇಶ್‌ ಬಾಘೇಲ್‌ ಪ್ರಶ್ನೆ

ಹೊಸದಿಲ್ಲಿ : ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆ ಆಪರೇಷನ್‌ ಸಿಂದೂರದ ಯಶಸ್ಸನ್ನು ಛತ್ತೀಸ್‌ಗಢದ ಮಾಜಿ ಸಿಎಂ ಮತ್ತು ಕಾಂಗ್ರೆಸ್‌ ನಾಯಕ ಭೂಪೇಶ್‌ ಬಾಘೇಲ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ತೆತ್ತಿರುವುದು ಹಾಗೂ ಜೀವಹಾನಿ ಗಮನಿಸಿದರೆ ಕಾರ್ಯಾಚರಣೆ ಯಶಸ್ವಿಯಾಗಿದೇ ಎಂದು ಹೇಗೆ ಅನಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಶ್ಮೀರದಲ್ಲಿ ಜೀವಹಾನಿಯನ್ನು ತಡೆಯುವಲ್ಲಿ ವಿಫಲವಾದವರು ಯಾರು ಎಂದು ಪ್ರಶ್ನಿಸಿದ ಭೂಪೇಶ್‌, ಈ ಲೋಪಕ್ಕೆ ಹೊಣೆ ಯಾರು? ಪ್ರವಾಸಿಗರನ್ನು ಕೊಂದ ಆ ಭಯೋತ್ಪಾದಕರನ್ನು ಸೆರೆಹಿಡಿಯಲು ಆಗಿಲ್ಲ. ಹೀಗಿದ್ದರೂ, ಆಪರೇಷನ್‌ ಸಿಂಧೂರ ಯಶಸ್ವಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.

ಕಾಶ್ಮೀರದಲ್ಲಿ ಈಗ ಎಲ್ಲವೂ ಸರಿಯಿದೆ ಎಂಬ ಸರ್ಕಾರದ ಹೇಳಿಕೆಯನ್ನು ಟೀಕಿಸಿದ ಭೂಪೇಶ್‌, ಸರ್ಕಾರದ ಭರವಸೆ ಮೇರೆಗೆ ಜನರು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದರು. ಆದರೆ, ಅವರಿಗೆ ಅಲ್ಲಿ ಭದ್ರತೆ ಇಲ್ಲದೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು? 26 ಜನರನ್ನು ಕೊಂದ ಭಯೋತ್ಪಾದಕರನ್ನು ಸೆರೆಯಿಡಿಯುವಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

Tags:
error: Content is protected !!