ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅಂಬರೀಶ್ ಪುಣ್ಯಸ್ಮರಣೆ ದಿನವಾದ ಇಂದು ಸುಮಲತಾ ಬೆಂಗಳೂರಿನ ಕಂಠೀರವ ಸುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಅವರ ನೆನಪುಗಳನ್ನು ನೆನೆದು “ಎಲ್ಲೆಲ್ಲಿಯೂ ನೀನೇ ಎಂದೆಂದಿಗೂ ನೀನೇ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಅಂಬಿ ಅಜರಾಮರ ಅವರ ನೆನಪು ಎಲ್ಲಾ ಕಡೆ ಇರುತ್ತೆ. ಮರಿ ರೆಬೆಲ್ ಆಗಮನದಿಂದ ಸಂತಸವಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದರು.
ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ಇತಿಹಾಸ ನೋಡಿದರೆ ಉಪಚುನಾವಣೆಗಳಲ್ಲಿ ರೂಲಿಂಗ್ ಪಾರ್ಟಿಯೇ ಗೆಲ್ಲುತ್ತಾ ಬಂದಿದೆ. ಎಲ್ಲಾ ಪಕ್ಷಗಳು ಗೆಲ್ಲುವುದಕ್ಕಾಗಿಯೇ ಯೋಜನೆ ರೂಪಿಸಿಕೊಂಡಿರುತ್ತಾರೆ. ಆದರೆ ಅಂತಿಮ ತೀರ್ಪು ನೀಡುವುದು ಜನತೆ ಅಲ್ಲವೇ. ನಿಖಿಲ್ ಇನ್ನೂ ಯುವಕರಿದ್ದಾರೆ, ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದರು.
ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ವೇಳೆ ನಟ ದೊಡ್ಡಣ್ಣ ಹಾಗೂ ರಾಕ್‌ಲೈನ್ ವೆಂಕಟೇಶ್ ಜೊತೆಗಿದ್ದು ಸಾಥ್ ನೀಡಿದರು.





