Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಯುಪಿಐ ಮೂಲಕ ಲಂಚ ಪಡೆದ ಆರೋಪ: ಮೂವರು ಅಧಿಕಾರಿಗಳ ವಿರುದ್ಧ ದೂರು ದಾಖಲು

ಮೈಸೂರು: ಯುಪಿಐ ಮೂಲಕ ಲಂಚ ಪಡೆದ ಆರೋಪದಡಿ ಮೈಸೂರಿನ ಮೂವರು ಅಧಿಕಾರಿಗಳ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಈ ಕುರಿತು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕಿನ ತಹಸೀಲ್ದಾರ್‌ ಶ್ರೀನಿವಾಸ್‌, ಅಂತರಸಂತೆ ನಾಡಕಚೇರಿಯ ರೆವಿನ್ಯು ಇನ್ಸ್‌ಪೆಕ್ಟರ್‌ ಗೋವಿಂದರಾಜು ಹಾಗೂ ಎನ್‌.ಬೆಳ್ತೂರು ಗ್ರಾಮ ಲೆಕ್ಕಾಡಳಿತಾಧಿಕಾರಿ ನಾಗರಾಜು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಎಚ್‌.ಡಿ.ಕೋಟೆಯ ಬಿ.ವಿ.ಮಮತಾ ಕುಮಾರಿ ಎಂಬುವವರ ಬಳಿ ಅಧಿಕಾರಿಗಳು 50 ಸಾವಿರ ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುಂಡತ್ತೂರು ಗ್ರಾಮದ ಸರ್ವೆ ನಂ.10ರ 5 ಎಕರೆ 1 ಗುಂಟೆ ಭೂಮಿಯನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಧಿಕಾರಿಗಳು ಆಸ್ತಿ ಪರಭಾರೆ ಮಾಡಿದ್ದರು. ಬಳಿಕ ಆಸ್ತಿ ಹಂಚಿಕೆ ಮಾಡಿ ಮಾರಾಟ ಮಾಡಲು ಹಾಗೂ ಹಿಂದಿನಂತೆ ದಾಖಲೆಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳಲು ಲಂಚಕ್ಕೆ ಬೇಡಿಕೆಯನ್ನಿಟ್ಟಿದ್ದರು.

ಈ ವಿಚಾರವಾಗಿ ಮೊದಲ ಹಂತದಲ್ಲಿ 5 ಸಾವಿರ ಫೋನ್‌ ಪೇ ಮೂಲಕ ಲಂಚ ಪಡೆದು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ

Tags: