ಜಿಡ್ಡು ಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯೇ ಅಪಸಹ್ಯವೆನಿಸುವ ವಿಕ್ಷಿಪ್ತತೆ ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರ. ಸರ್ವಜನಾಂಗದ ಶಾಂತಿಯ ತೋಟವೆಂಬುದಕ್ಕೆ ಸೂಕ್ತವಾದ ಮೈಸೂರಿನಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಕುಕೃತ್ಯಗಳು ನಡೆಯುತ್ತಿರುವುದು ಸ್ವೀಕಾರ್ಹವಲ್ಲ. ಪ್ರೇಮಾಂಕುರವಾಗಿ ಅರಳಬೇಕಾದ ಹೂವುಗಳು ವಿದಳನ ಹೊಂದುವಂತಹ ಸ್ಥಿತಿಗೆ ಈ ವ್ಯವಸ್ಥೆ ಬಾಗಿದೆ ಎಂಬುದನ್ನು …