Mysore
24
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ನಾಟ್ಯ ನಿಲ್ಲಿಸಿದ ಶಾಂತಲೆ

ಮೈಸೂರು: ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ಮೂಲಕ ಮನರಂಜನಾ ಕ್ಷೇತ್ರದಲ್ಲಿ ನಾಡಿನ ಸಂಸ್ಕೃತಿ ಹಾಗೂ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಹಳೆಯ ಚಿತ್ರಮಂದಿರಗಳಲ್ಲಿ ಒಂದಾದ ಶಾಂತಲಾ ಇನ್ನು ಚಿತ್ರರಸಿಕರ ಪಾಲಿಗೆ ನೆನಪಾಗಷ್ಟೇ ಉಳಿಯಲಿದೆ.

ಹೌದು, ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶಾಂತಲಾ ಚಿತ್ರಮಂದಿರ ಕಳೆದ ಸುಮಾರು 46 ವರ್ಷಗಳಿಂದ ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸುತ್ತಾ, ಎಲ್ಲರಿಗೂ ಮನರಂಜನೆ ನೀಡುತ್ತಾ ಬಂದಿತ್ತು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಅದರ ಕೊನೆಯ ಆಟ ಮುಗಿದಿತ್ತು.

ಕೊರೊನಾ ವೈರಸ್‌ ಹಾವಳಿ ಶುರುವಾಗಿದ್ದ ವೇಳೆಯೇ ಚಿತ್ರಪ್ರದರ್ಶನ ನಿಲ್ಲಿಸಿದ್ದ ಶಾಂತಲಾದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಪ್ರದರ್ಶನಗಳು ಕಾಣಲೇ ಇಲ್ಲ. ಅದು ಶಾಶ್ವತವಾಗಿ ಮುಚ್ಚಿಹೋಗಿದೆ ಎಂಬ ಸಂಗತಿಯನ್ನು ತಿಳಿದು ಅನೇಕ ಚಿತ್ರರಸಿಕರು ಬೇಸರ ವ್ಯಕ್ತಪಡಿಸಿದ್ದರು.

ಬಂಗಾರದ ಪಂಜರ ಚಿತ್ರ ಪ್ರದರ್ಶನದ ಮೂಲಕ ಶಾಂತಲಾ ಚಿತ್ರಮಂದಿರ, ಸಿನಿಮಾಗಳನ್ನು ಪೇಕ್ಷಕರಿಗೆ ತಲುಪಿಸುವ ಕೊಂಡಿಯಾಗಿ ಕಾರ್ಯ ಆರಂಭಿಸಿತ್ತು. ರಮೇಶ್‌ ಅರವಿಂದ್‌ ಅಭಿನಯದ ಶಿವಾಜಿ ಸುರತ್ಕಲ್‌ ಇಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾವಾಗಿತ್ತು ಎಂದು ಹೇಳಲು ಇಂದಿಗೂ ನಮಗೆ ಭಾರೀ ಬೇಸರವಾಗುತ್ತಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೇ ಚಿತ್ರಮಂದಿರ ಕ್ಲೋಸ್‌ ಆಗಿದ್ದು, ಶಾಂತಲಾ ಚಿತ್ರಮಂದಿರದ ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭವನ್ನು ಸಹ ಏರ್ಪಡಿಸಲಾಗಿತ್ತು. ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಕಣ್ಣಾಲಿಗಳು ತುಂಬಿಬಂದವು.

ಚಿತ್ರಮಂದಿರ ಆರಂಭವಾದ ದಿನದಿಂದ ಕೊನೆಯವರೆಗೂ ಸಿನಿಮಾ ಪ್ರದರ್ಶನಕ್ಕೂ ಮುನ್ನ ನಮೋ ವೆಂಕಟೇಶ, ನಮೋ ತಿರುಮಲೇಶ ಹಾಡನ್ನು ಪ್ರಸಾರ ಮಾಡಲಾಗುತ್ತಿತ್ತು. ಕೊನೆಯ ದಿನ ಕೂಡ ಅಂತಿಮ ಸಲ ಈ ಹಾಡನ್ನು ಪ್ರಸಾರ ಮಾಡಲಾಗಿತ್ತು. ಈ ವೇಳೆ ಚಿತ್ರಮಂದಿರದ ಸಿಬ್ಬಂದಿಗಳು ಕಣ್ಣೀರು ಹಾಕಿದ್ದರು.

ಬಳಿಕ ಕೆಲವು ಚಿತ್ರಗಳ ದೃಶ್ಯಗಳನ್ನು ಕೂಡ ಕೊನೆಯ ಬಾರಿಗೆ ಎಲ್ಲರೂ ಜೊತೆಗೂಡಿ ವೀಕ್ಷಿಸಿದರು. ಬಳಿಕ ಚಿತ್ರಮಂದಿರದ ಮುಂಭಾಗದಲ್ಲಿ ಸಿಬ್ಬಂದಿ ಮತ್ತು ಪಾಲುದಾರರಾದ ಪದ್ಮನಾಭ ಪದಕಿ, ಮಧುಸೂದನ, ಅನಿಲ್‌, ಹನುಮಂತು, ಪ್ರಕಾಶ್‌, ವ್ಯವಸ್ಥಾಪಕ ದೇವರಾಜ್‌ ಮುಂತಾದವರು ಕೊನೆಯ ಫೋಟೋ ತೆಗೆಸಿಕೊಂಡಿದ್ದರು.

ಇಷ್ಟೆಲ್ಲಾ ಹೊಚ್ಚ ಹೊಸ ಸಿನಿಮಾಗಳನ್ನು ತೋರಿಸುವ ಮೂಲಕ ಸಿನಿ ರಸಿಕರಿಗೆ ಭಾರೀ ಮನರಂಜನೆ ನೀಡುತ್ತಿದ್ದ ಶಾಂತಲಾ ಚಿತ್ರಮಂದಿರವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ಜನರು ಶಾಂತಲಾ ಚಿತ್ರಮಂದಿರವನ್ನು ನೋಡಿ ಖುಷಿಪಡುತ್ತಿದ್ದರು. ಆದರೆ ಈಗ ಅದನ್ನು ತೆರವು ಮಾಡಲಾಗಿದ್ದು, ಇಲ್ಲಿ ಮಲ್ಟಿಪ್ಲೆಕ್ಸ್‌ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಸಿನಿ ರಸಿಕರಿಗೆ ಭಾರೀ ಮನರಂಜನೆ ನೀಡುತ್ತಿದ್ದ ಶಾಂತಲಾ ಚಿತ್ರಮಂದಿರವನ್ನು ಈಗ ತೆರವು ಮಾಡಲಾಗಿದ್ದು, ಚಿತ್ರ ರಸಿಕರಿಗೆ ಭಾರೀ ಬೇಸರ ತರಿಸಿದೆ. ಚಿತ್ರಮಂದಿರದ ತೆರವು ಬಳಿಕ ಆ ಸ್ಥಳದಲ್ಲಿ ಮಲ್ಟಿಪ್ಲೆಕ್ಸ್‌ ಕಟ್ಟಲಾಗುತ್ತದೆ. ಈ ಮೂಲಕ ಶಾಂತಲಾ ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ.

Tags:
error: Content is protected !!