ಪಂಜು ಗಂಗೊಳ್ಳಿ ಪ್ರಕಾಶ್ ದೇಶಮುಖ್ ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ. ಚಿಕ್ಕವರಿರುವಾಗ ಅವರ ಮೈಮೇಲೆ ಅಲ್ಲಲ್ಲಿ ಬಿಳಿ ಕಲೆಗಳು ಕಾಣಿಸಿಕೊಂಡವು. ಅವರ ಮನೆಯವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಒಮ್ಮೆ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ತೋರಿಸಿದಾಗ ಅವರಿಗೆ ಕುಷ್ಠರೋಗ ತಗುಲಿರುವುದು …


