ಮೈಸೂರು : ನನ್ನ ಹೋರಾಟದ ಹಿಂದೆ ನೂರಾರು ಕೈಗಳು, ಕಣ್ಣುಗಳು ಹಾಗೂ ಹೃದಯಗಳ ಬೆಂಬಲವಿದೆ ಎಂದು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಆದಿವಾಸಿ ನಾಯಕ ಎಚ್.ಡಿ. ಕೋಟೆ ತಾಲೂಕು ಮೊತ್ತ ಹಾಡಿಯ ಸೋಮಣ್ಣ ಹೇಳಿದರು. ಕುವೆಂಪುನಗರದ ಕೆ ಬ್ಲಾಕಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಕಲ್ಪತರು ಚಾರಿಟಬಲ್ ಟ್ರಸ್ಟಿನಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಗಷ್ಟೇ ಜೀತದಿಂದ ವಿಮುಕ್ತನಾಗಿದ್ದ ನಾನು ಮೊದಲಿಗೆ ನನ್ನ ಹೋರಾಟ ದಲಿತ ಸಂಘರ್ಷ ಸಮಿತಿಯ ಮೂಲಕ ಆರಂಭವಾಯಿತು. ಚಾ. ನಂಜುಂಡಮೂರ್ತಿ, ಬೆಟ್ಟಯ್ಯ ಕೋಟೆ ಅವರೊಂದಿಗೆ ಸೇರಿ ಹೋರಾಟಕ್ಕಿಳಿದೆ. ನಂತರ ಕ್ಷೀರಸಾಗರ ಜೊತೆಯಾದರು. ಈ ಹೋರಾಟದಲ್ಲಿ ನೂರಾರು ಕೈಗಳು, ಕಣ್ಣುಗಳು, ಹೃದಯಗಳು ಬೆಂಬಲಿಸಿದ್ದರಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದರು. ಕಳೆದ ಐದು ದಶಕಗಳಿಂದ ಆದಿವಾಸಿಗಳ ಹಕ್ಕಗಳಿಗಾಗಿ ಹೋರಾಟ ಮಾಡುತ್ತಾ ಬಂದರೂ ಇನ್ನೂ ಹಲವಾರು ಸಮಸ್ಯೆಗಳು ಹಾಗೆಯೇ ಉಳಿದಿವೆ. ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕು. ಆದಿವಾಸಿಗಳಿಗೆ …

