ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಹೋಬಳಿಯ ದಡಿಗ ಗ್ರಾಮದಲ್ಲಿ ಹಲವು ಐತಿಹಾಸಿಕ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಸಿದ್ಧವಾಗಿರುವ ಯೋಗಾನರಸಿಂಹ ದೇವಾಲಯವು ಸಂಪೂರ್ಣ ಶಿಥಿಲಗೊಂಡಿದೆ. ನಿರ್ವಹಣೆಯಿಲ್ಲದೆ ಗರ್ಭಗೃಹದ ಗೋಡೆಗಳು, ಕಂಬಗಳೂ ಸೇರಿದಂತೆ ಸಂಪೂರ್ಣ ದೇವಾಲಯವೇ ಕುಸಿಯುವ ಭೀತಿಯಲ್ಲಿದೆ.ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ …