ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸುವ ಕಲೆ ಕಲಿಸಿದ ಬದುಕಿನ ರಂಗಭೂಮಿ, ಕಷ್ಟದ ಗಳಿಗೆಯನ್ನು ರಟ್ಟೆಬಲದಿಂದ ದಾಟುವ ಆತ್ಮವಿಶ್ವಾಸ ಕೊಟ್ಟಿತು! ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಪ್ರವಾಹದಲ್ಲಿರುವ ತೇಲುವ ಎಲೆಯಂತೆ ಸದಾ ಅಸ್ಥಿರವಾಗಿರುತ್ತಿತ್ತು. ಬೇಸಗೆಯಲ್ಲಿ ಸುಖದ ತಾರಕಕ್ಕೇರುವ ಗ್ರಾಫು, ಆಷಾಢದಲ್ಲಿ ರೋಗಿಯಂತೆ ಹಾಸಿಗೆಯಲ್ಲಿ ಬಿದ್ದು …