ತಂಬೂರಿ ಇಟ್ಟಿದ್ದ ದಿಕ್ಕಿಗೆ ತಲೆಯೊಡ್ಡಿದ್ದ ಬಸಪ್ಪನ ಜೀವ ಮಗನ ಮಾತಿಗೆ ಜಿಗಿಯುತ್ತಿತ್ತು. ಹೆಂಡತಿ ಹಾಡುವುದು ಬೇಡವೆನ್ನುತ್ತಿದ್ದರೆ ಇತ್ತ ಮಗ, ಅಪ್ಪ ಹಾಡಲೇಬೇಕೆಂದು ನನ್ನೊಳಗಿನ ಪದಗಳಿಗೆ ಆಸರೆಯಾಗಿ ನಿಂತಿದ್ದ. ಅಪ್ಪನಿಂದ ಅಷ್ಟೋ ಇಷ್ಟೋ ಪದಗಳನ್ನು ಎದೆಯೊಳಗಿರಿಸಿಕೊಂಡಿದ್ದ ಮಗನನ್ನು ಕಣ್ಣೆತ್ತಿ ನೋಡಿದ ಗವಿಬಸಪ್ಪನವರ ಕಣ್ಣುಗಳಲ್ಲಿ …

