ಜನಪ್ರತಿನಿಧಿಗಳು ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಮೈಸೂರು- ಊಟಿ ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಮುಂಭಾಗ ನಿರ್ಮಿಸಲಾಗುತ್ತಿರುವ ಪ್ರಯಾಣಿಕರ ತಂಗುದಾಣದ ವಿವಾದ ಜ್ವಲಂತ ಸಾಕ್ಷಿಯಾಗಿದೆ. ತಂಗುದಾಣದ ಅಂಗಳಕ್ಕೆ ಧರ್ಮದ ಹಂಗು ಮೆತ್ತುವ ಪ್ರಯತ್ನ ನಡೆದಿರುವುದು ದುರದೃಷ್ಟಕರ ಬೆಳವಣಿಗೆ. ವಾಸ್ತವವಾಗಿ ಸಮಸ್ಯೆ ಪ್ರಯಾಣಿಕರ ತಂಗುದಾಣದ್ದಲ್ಲ. …