ಹುಟ್ಟಿಬೆಳೆದ ಊರಲ್ಲಿ ಕಹಿಯಾದ ನೆನಪುಳ್ಳವರು ಪಟ್ಟಣಕ್ಕೆ ಬಂದರೆ, ಮರಳಿ ಊರತ್ತ ಮುಖ ಮಾಡುವುದಿಲ್ಲ. ನನ್ನಮ್ಮ ಅವರ ಪೈಕಿ ಒಬ್ಬಳು. ಆಕೆ ಮನೆಗೆ ಅಂಟಿಕೊಂಡಿದ್ದ ಪಾರಂಪೋಕ್ ಜಾಗದಲ್ಲಿ ಸೊಗಸಾದ ಹಿತ್ತಲನ್ನು ಮಾಡಿದ್ದಳು. ಆದರೆ ಐವತ್ತು ವರ್ಷ ಅನುಭೋಗದಲ್ಲಿದ್ದರೂ ಅದನ್ನು ಸಕ್ರಮಗೊಳಿಸಿ ದಾಖಲೆ ಇಟ್ಟುಕೊಳ್ಳಲಿಲ್ಲ. …