ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್‌ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. …