ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ …