Mysore
20
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಆಂದೋಲನ ಓದುಗರ ಪತ್ರ

Homeಆಂದೋಲನ ಓದುಗರ ಪತ್ರ
ಓದುಗರ ಪತ್ರ

ನ.14 ರಂದು ದೇಶದ ಮೊದಲದ ಪ್ರಧಾನಿ ಪಂ. ಜವಾಹರ್‌ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮಕ್ಕಳಿಗೆ ರಜಾ ದಿನವಲ್ಲ ಆದರೂ ಸಂಭ್ರಮಾಚರಣೆಯ ದಿನವಾಗಿದೆ. ನ.14ರಂದು ಮೈಸೂರು ಮೃಗಾಲಯ, ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಉಚಿತ ಪ್ರವೇಶವಿರುತ್ತದೆ. ಮೈಸೂರು ಮೃಗಾಲಯಕ್ಕೆ ಭೇಟಿ …

ಓದುಗರ ಪತ್ರ

ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿರುವುದು , ಕರ್ನಾಟಕದ ಜನತೆಗೆ ಸಂದ ಜಯವೆಂದೇ ಹೇಳಬೇಕು. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಜನರಿಗೆ ಶಾಶ್ವತವಾಗಿ ಕುಡಿಯುವ ನೀರಿಗೆತೊಂದರೆ ಇಲ್ಲದಂತಾಗುತ್ತದೆ. ಯಾವುದೇ ರಾಜಕೀಯ ಪಕ್ಷವೂ ಇದರಲ್ಲಿ ರಾಜಕಾರಣ …

ಓದುಗರ ಪತ್ರ

ಓದುಗರ ಪತ್ರ: ಗರಂ ಗರಂ..! ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಮೈಸೂರಲ್ಲಿ ಬಿಸಿ ಮುಟ್ಟಿಸಿದರಂತೆ ಸಿಎಂ ! ಹೌದು, ಕೆಲವರು ಕಚೇರಿಯಲ್ಲಿ ಇರುತ್ತಾರೆ ಸದಾ ಬೆಚ್ಚಗೆ.. ಸಾರ್ವಜನಿಕರು ಕೂಡ, ತಮ್ಮ ಕೆಲಸ-ಕಾರ್ಯಗಳಿಗಾಗಿ ಮಾಡಲೇಬೇಕಂತೆ ಅಂಥವರ ‘ಕೈ’ ಬೆಚ್ಚಗೆ ! -ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು

ಓದುಗರ ಪತ್ರ

ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ರಸ್ತೆ, ಬೀದಿ ದೀಪ ಮೊದಲಾದ ಮೂಲ ಸೌಕರ್ಯಗಳಿಲ್ಲದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಗಳು ತೀರಾ ಹದಗೆಟ್ಟಿದ್ದುಸಾರ್ವಜನಿಕರು ಹರ ಸಾಹಸಪಡುವಂತಾಗಿದೆ. ಬೀದಿ ದೀಪಗಳು ಕೆಟ್ಟಿದ್ದು ತಿಂಗಳುಗಳು ಕಳೆದರೂ ಸಂಬಂಧಪಟ್ಟವರು ಸರಿಪಡಿಸಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವು, ಚೇಳುಗಳ …

ಓದುಗರ ಪತ್ರ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆದ ‘ಯುವ ಸಂಭ್ರಮ’ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಳಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಸ್ಮಾರಕ ಇರುವ ಮುಖ್ಯ ದ್ವಾರದ ಪಕ್ಕದ ಕಾಂಪೌಂಡ್ ಮತ್ತು ಮೋರಿಗೆ ಎಸೆಯಲಾಗಿದೆ. ಮೈಸೂರಿನಲ್ಲಿ …

ಓದುಗರ ಪತ್ರ

ಡೆನ್ಮಾರ್ಕ್ ಸರ್ಕಾರ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಬಳಸುವ ಮಕ್ಕಳಲ್ಲಿ ಶೇ.60ಕ್ಕೂ ಹೆಚ್ಚು ಮಕ್ಕಳು ಆತ್ಮವಿಶ್ವಾಸದ ಕೊರತೆ, ಶೇ.40ಕ್ಕಿಂತ ಹೆಚ್ಚು ಮಕ್ಕಳು ನಿದ್ರೆ ವ್ಯತ್ಯಯ, ಮತ್ತು ಶೇ.30ಕ್ಕಿಂತ ಹೆಚ್ಚು ಮಕ್ಕಳು …

ಓದುಗರ ಪತ್ರ

ಇತ್ತೀಚೆಗೆ ಕೆಲವು ರಾಜಕಾರಣಿಗಳು ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ‘ಕ್ರಾಂತಿ’ ಯಾಗುತ್ತದೆ ಎಂದು ಹುಯಿಲೆಬ್ಬಿಸುತ್ತಿರುವುದು ಮಾಧ್ಯಮಗಳಲ್ಲಿವರದಿಯಾಗುತ್ತಿದೆ. ‘ಕ್ರಾಂತಿ’ ಎಂಬ ಪದಕ್ಕೆ ಅತ್ಯಂತ ವಿಶಾಲವಾದ ಅರ್ಥವಿದೆ. ಜಗತ್ತಿನ ಇತಿಹಾಸದಲ್ಲಿ ಫ್ರಾನ್ಸ್ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಸೇರಿದಂತೆ ನೂರಾರು ಕ್ರಾಂತಿಗಳು ಹಾಸು ಹೊಕ್ಕಾಗಿವೆ. …

ಓದುಗರ ಪತ್ರ

ಮೈಸೂರಿನ ಬೋಗಾದಿ-ಗದ್ದಿಗೆ ರಸ್ತೆಯ ಅಕ್ಕ ಪಕ್ಕದ ಪ್ರದೇಶಗಳಿಗೆ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಗೆ ಪೈಪ್‌ಲೈನ್ ಅಳವಡಿಸಿ ಎರಡು ತಿಂಗಳುಗಳೇ ಕಳೆದಿದ್ದರೂ ಇನ್ನೂ ಕೂಡ ಕುಡಿಯುವ ನೀರು ಯಾರ ಮನೆಗೂ ಬಂದಿಲ್ಲ. ಕೇವಲ ಪೈಪ್ ಲೈನ್ ಅಳವಡಿಸಿರುವ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಕೆಲವು …

ಓದುಗರ ಪತ್ರ

ರ‍್ಯಾಗಿಂಗ್ ಎಂಬ ಭೂತ ಶಾಲಾ ಮಟ್ಟಕ್ಕೂ ಕಾಲಿಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ. ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗೆ ಹಣ ತರುವಂತೆ ಒತ್ತಡ ಹೇರಿದ್ದು, ಹಣ ತರದೇ ಇದ್ದಾಗ ಅವನ ಗುಪ್ತಾಂಗದ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿರುವುದು …

ಓದುಗರ ಪತ್ರ

ಓದುಗರ ಪತ್ರ: ನರ - ವಾನರ ! ಕಾಡನ್ನೂ ಬಿಡದೆ ಕಾಡಿದ ನಾಡಿನಲ್ಲಿರಬೇಕಾದ ನರ, ಮುಕ್ತವಾಗಲಿಲ್ಲ ಒತ್ತುವರಿಯಿಂದ ನಾಗರಹೊಳೆ, ಬಂಡಿಪುರ.. ಪರಿಣಾಮ ಊರು, ಕೇರಿ ನಗರಗಳ ಹಾದಿ ಹಿಡಿದವು ಆನೆ, ಹಂದಿ, ಚಿರತೆ, ಹುಲಿ..,ವಾನರ ! - ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು

Stay Connected​
error: Content is protected !!