Mysore
20
overcast clouds
Light
Dark

ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಜೊತೆಗೆ ಝೀಕಾ ವೈರಸ್ ಆತಂಕ ; ಎಚ್ಚರವಹಿಸಲು ವೈದ್ಯರ ಸೂಚನೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಡೆಂಗ್ಯೂ ಆರ್ಭಟದ ಜೊತೆಗೆ ಜನರಲ್ಲಿ ನಾನಾ ಬಗೆಯ ವೈರಸ್‌ ಗಳ ಆತಂಕ ಹೆಚ್ಚಾಗುತ್ತಿದೆ. ಅಲ್ಲದೆ ನಗರದಲ್ಲಿ ಝೀಕಾ ವೈರಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿ ಪ್ರಕರಣಗಳು ಹೆಚ್ಚಾಗಿದೆ.

ಬದಲಾಗುತ್ತಿರುವ ವಾತವರಣದಿಂದಾಗಿ ಡೆಂಗ್ಯೂ, ಟೈಫಾಯ್ಡ್‌, ವೈರಲ್‌ ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು, ಇದರ ಜೊತೆಗೆ ಝೀಕಾ ಹಾಗೂ ಮೆದುಳು ತಿನ್ನುವ ಅಮೀಬಾ ವೈರಸ್‌ ಆತಂಕವು ಕೂಡ ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಗಳು ಫುಲ್ ಹೈ ಅಲರ್ಟ್‌ ಆಗಿವೆ.

ಈಗಾಗಲೇ ಡೆಂಗ್ಯೂ ಹಾಗೂ ಝೀಕಾ ವೈರಸ್‌ ಎರಡು ರೋಗ ಲಕ್ಷಣಗಳಲ್ಲೂ ಸಾಮತ್ಯೆ ಇದ್ದು ವೈದ್ಯರು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ. ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಕೀಲು ಮತ್ತು ಸ್ನಾಯು ನೋವು ಮತ್ತೀತರ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯವಹಿಸದೆ ಎಚ್ಚರಿವಹಿಸಬೇಕು. ‌

ಬಹುತೇಕ ಸೋಂಕು ಪೀಡಿತರಿಗೆ ರೋಗ ಲಕ್ಷಣಗಳು ಕಂಡು ಬರುವುದಿಲ್ಲ. ಇನ್ನ ಕೆಲವರಿಗೆ ರೋಗ ಲಕ್ಷಣಗಳು ಸೌಮ್ಯ ಮತ್ತು ಸಾಧಾರಣ ಸ್ವರೂಪದಲ್ಲಿದ್ದು, ೨ ರಿಂದ ೭ ದಿನಗಳ ವರೆಗೆ ಕಂಡು ಬರ್ತಿದೆ. ಈಗಾಗಿಯೇ ವೈದ್ಯರು ಜ್ವರ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯಲು ಎಚ್ಚರಿಕೆ ನೀಡಿದ್ದಾರೆ.

ಈ ಸಮಯದಲ್ಲಿ ಜನರು ಮನೆ ಸುತ್ತ ಸ್ವಚ್ಛತೆಯನ್ನು ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ. ಅಲ್ಲದೆ ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆ ಸಹ ನೀಡಿದ್ದಾರೆ.