Mysore
24
broken clouds

Social Media

ಸೋಮವಾರ, 16 ಮಾರ್ಚ್ 2026
Light
Dark

ರಾಜ್ಯಪಾಲ ಗೆಹ್ಲೋಟ್‌ಗೆ Z ಶ್ರೇಣಿ ಭದ್ರತೆ: ಅಚ್ಚರಿ ಮೂಡಿಸಿದ ಕೇಂದ್ರದ ನಡೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತಾರಕ್ಕಕ್ಕೇರಿರುವ ನಡುವೆಯೇ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಕೇಂದ್ರ ಸರ್ಕಾರ z ಶ್ರೇಣಿ ಭದ್ರತೆ ಕಲ್ಪಿಸಿದೆ.

ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆಯ ವರದಿಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಇನ್ನು ಮುಂದೆ ಸಿಆರ್‌ಪಿಎಫ್‌ ಸಿಬ್ಬಂದಿ ರಾಜ್ಯಪಾಲ ರಕ್ಷಣೆ ಜವಾಬ್ದಾರಿ ವಹಿಸಿಕೊಳ್ಳಲಿದೆ. ಕಳೆದ ಕೆಲದಿನಗಳಿಂದ ರಾಜ್ಯಪಾಲರು ಬುಲೆಟ್‌ ಫ್ರೊಫ್‌ ಕಾರು ಪಡೆದಿದ್ದರು. ಇದೀಗ z ಶ್ರೇಣಿಯ ಭದ್ರತೆ ಮಹತ್ವ ಪಡೆದುಕೊಂಡಿದೆ.

ಮುಡಾ ನಿವೇಶನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ನೀಡಿದ ಬಳಿಕ ಆಡಳಿತಾರೂಢ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಹಾಗೂ ಸಚಿವರು ರಾಜ್ಯಪಾಲರ ವಿರುದ್ಧ ನೇರವಾಗಿ ತಿರುಗಿಬಿದ್ದಿದ್ದರು.

Tags:
error: Content is protected !!